ಭಾರತದ ನ್ಯಾಯಾಂಗ ವ್ಯವಸ್ಥೆ ಹಾಡಿ ಹೊಗಳಿದ ದೀಪಕ ಮಿಶ್ರಾ


ಹೊಸದಿಲ್ಲಿ: ಭಾರತದ ನ್ಯಾಯಾಂಗ ವ್ಯವಸ್ಥೆ ಜಗತ್ತಿನಲ್ಲಿಯೇ ಅತ್ಯಂತ ಬಲಿಷ್ಠ ಮತ್ತು ಸದೃಢವಾಗಿದೆ ಎಂದು ನಿರ್ಗಮಿಸುತ್ತಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಹೇಳಿದ್ದಾರೆ.

ಇಂದು ನಿವೃತ್ತರಾಗಲಿರುವ ಮಿಶ್ರಾ ಜಾಗಕ್ಕೆ ಬುಧವಾರ ನ್ಯಾಯಮೂರ್ತಿ ರಂಜನ್ ಗೊಗೋಯ್ ಹೊಸ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

ಸುಪ್ರೀಂ ಕೋರ್ಟ್ ವಕೀಲರ ಸಂಘವು ಸೋಮವಾರ ಆಯೋಜಿಸಿದ್ದ ಆತ್ಮೀಯ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದ ದೀಪಕ್ ಮಿಶ್ರಾ, ಭಾರತೀಯ ಕಾನೂನು ವ್ಯವಸ್ಥೆಯನ್ನು ಮುಕ್ತಕಂಠದಿಂದ ಕೊಂಡಾಡಿದರು.

ನ್ಯಾಯಾಧೀಶರು ಮಾನವೀಯ ಪ್ರವೃತ್ತಿ ಹೊಂದಿರಬೇಕು. ಯಾವುದೇ ಪ್ರಕರಣದ ತೀರ್ಪು ನೀಡುವಾಗ ವ್ಯಕ್ತಿಯ ಇತಿಹಾಸ ಪರಿಗಣಿಸುವ ಅಗತ್ಯವಿಲ್ಲ. ಬದಲಾಗಿ ಆತನ ಕಾರ್ಯಚಟುವಿಕೆಗಳತ್ತ ಗಮನಹರಿಸುವುದು ಮುಖ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಿದ ಅವಧಿ ತಮಗೆ ಸಂಪೂರ್ಣ ತೃಪ್ತಿ ತಂದಿದೆ. ಅದಕ್ಕಾಗಿ ಬಾರ್ ಕೌನ್ಸಿಲ್ ನೀಡಿದ ಸಹಕಾರಕ್ಕೆ ತಮ್ಮ ಕೃತಜ್ಞತೆ ಇದೆ ಎಂದೂ ಕೂಡ ಮಿಶ್ರಾ ಹೇಳಿದರು.

Leave a Reply

Your email address will not be published.