ರೈತನಿಗೆ ಪರಿಹಾರ ನೀಡಲು ಹಿಂದೇಟು: ಎಸಿ ಕಚೇರಿ ವಾಹನ, ಪಿಠೋಪಕರಣ ಜಪ್ತಿ 


ಧಾರವಾಡ: ಜಮೀನು ಸ್ವಾಧೀನ ಪಡೆಸಿಕೊಂಡು ರೈತನಿಗೆ ಪರಿಹಾರ ಹಣ ನೀಡದ ಹಿನ್ನಲೆ ನಯ್ಯಾಲಯದ ಆದೇಶದ ಮೇರೆಗೆ ಉಪವಿಭಾಗಾಧಿಕಾರಿ ಕಚೇರಿಯ  ಪೀಠೋಪಕರಣ, ಎಸಿ ವಾಹನ ಜಪ್ತಿ ಮಾಡಿದ ಘಟನೆ ನಗರದಲ್ಲಿ ನಡೆದಿದೆ.

ಇಲ್ಲಿನ ನವನಗರದ ಸುತಗಟ್ಟಿ ಬಡಾವಣೆ ನಿವಾಸಿ ಬಸಯ್ಯ ಮೂಗ ಶಿವಯ್ಯನವರ ಎಂಬುವವರ ಒಂದು ಎಕರೆ ಇಪ್ಪತ್ತೈದು ಗುಂಟೆ ಜಮೀನನ್ನು 1992 ರಲ್ಲಿ ವಸತಿ ಯೋಜನೆಗಾಗಿ ಸ್ವಾಧೀನ ಪಡಿಸಿಕೊಳ್ಳಲಾಗಿತ್ತು.

14 ಲಕ್ಷ ರೂ. ಪರಿಹಾರ ನೀಡುವುದಾಗಿ ಹೇಳಿತ್ತು. ಆದರೆ ಹಣ ನೀಡದ ಹಿನ್ನಲೆ ಎರಡನೇ ಹೆಚ್ಚುವರಿ ದಿವಾಣಿ ನ್ಯಾಯಾಲಯದ ಆದೇಶದ ನ್ಯಾಯಾಲಯ ಸಿಬ್ಬಂದಿಗಳು ಎಸಿ ಕಚೇರಿ ಪೀಠೋಪಕರಣ, ಮೂರು ಕಂಪ್ಯೂಟರ್, ಹಾಗೂ ಒಂದು ಸ್ಕಾರ್ಪಿಯೋ ವಾಹನ ಜಪ್ತಿ ಮಾಡಲಾಗಿದೆ.

Leave a Reply

Your email address will not be published.