ಮಹಾರಾಷ್ಟ್ರದಲ್ಲಿ ಇನ್ನು ಮನೆ ಮನೆಗೆ ಮದ್ಯ !!


ಮುಂಬೈ: ಮನೆ ಮನೆಗೆ ನೀರು, ಸಿಲಿಂಡರ್ ತಲುಪಿಸುವ ವ್ಯವಸ್ಥೆ ಬಗ್ಗೆ ನೀವೆಲ್ಲ ಕೇಳಿದ್ದೀರಿ, ಅನುಭವಿಸಿದ್ದೀರಿ. ಆದರೆ, ಇದೀಗ ಮಹಾರಾಷ್ಟ್ರ ಸರಕಾರವು ಇನ್ನು ಮುಂದೆ ಮನೆ ಮನೆಗೆ ಮದ್ಯ ಪೂರೈಸುವ ವಿಶೇಷ ಯೋಜನೆಯೊಂದನ್ನು ಜಾರಿಗೆ ತರಲಿದೆ !

ಹೌದು, ಮಹಾರಾಷ್ಟ್ರದ ಅಬಕಾರಿ ಸಚಿವ ಚಂದ್ರಶೇಖರ್ ಭವಾನ್ಕುಲೆ ಇಂತಹ ಯೋಜನೆಯೊಂದನ್ನು ಜಾರಿಗೊಳಿಸುವ ಕುರಿತಂತೆ ಇಂದು ಹೇಳಿಕೆ ನೀಡಿದ್ದಾರೆ.

ಕುಡಿದು ವಾಹನ ಚಾಲನೆ ಮಾಡುವಾಗಿನ ಅಪಘಾತಗಳನ್ನು ತಡೆಯಲು ಈ ವಿನೂತನ ಯೋಜನೆ ಜಾರಿಮಾಡಲಾಗುತ್ತಿದೆ ಎಂದೂ ಸಚಿವರು ಸಮರ್ಥಿಸಿಕೊಂಡಿದ್ದಾರೆ.

ಮನೆ ಮನೆಗೆ ಮದ್ಯ ಪೂರೈಸುವ ಈ ಅಪರೂಪದ ಯೋಜನೆ ದೇಶದಲ್ಲಿಯೇ ಮೊಟ್ಟ ಮೊದಲ ಪ್ರಯೋಗವಾಗಲಿದೆ.

ನಕಲಿ ಮದ್ಯ ಸರಬರಾಜು, ಮದ್ಯದ ಕಳ್ಳಸಾಗಾಟ ತಡೆಗೂ ಈ ಯೋಜನೆ ನೆರವಾಗುತ್ತದೆ ಎಂಬುದೂ ಸಚಿವರ ಸಮಜಾಯಿಷಿ !

Leave a Reply

Your email address will not be published.