ವೇತನ ಬಿಡುಗಡೆಗೊಳಿಸಲು ಮೆಡಿಕಲ್ ವಿದ್ಯಾರ್ಥಿಗಳ ಪ್ರತಿಭಟನೆ


ದಾವಣಗೆರೆ: ಮೆಡಿಕಲ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸರ್ಕಾರ ವಿದ್ಯಾರ್ಥಿ ವೇತನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ ದಾವಣಗೆರೆಯಲ್ಲಿ ವೈದ್ಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು

ಜಿಲ್ಲಾಸ್ಪತ್ರೆಯ ಮುಂಭಾಗದಲ್ಲಿ  ಪ್ರತಿಭಟನೆ ಮಾಡಿದ ವಿದ್ಯಾರ್ಥಿಗಳು 8 ತಿಂಗಳಿನಿಂದ ವೇತನ ವಿಲ್ಲದೆ ಕೆಲಸ ಮಾಡುತ್ತಿದ್ದು ಕಿಂಚಿತ್ತು ಸರ್ಕಾರ ಕಾಳಜಿ ವಹಿಸುತ್ತಿಲ್ಲ ಅಂತ ಆರೋಪಿಸಿದರು. ಸರ್ಕಾರಿ ಕೋಟದಲ್ಲಿ ಆಯ್ಕೆಯಾದ ಜಿಲ್ಲೆಯ 230 ವಿದ್ಯಾರ್ಥಿಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ವೇತನ ವಿಲ್ಲದಿದ್ದರು ರೋಗಿಗಳ ಆರೈಕೆ ಮಾಡ್ತಿದ್ದಾರೆ. ರೋಗಿಗಳಿಗೆ ತೊಂದರೆ ಯಾಗದಂತೆ ಕೆಲಸ ಮಾಡಿದ್ರು ಸರ್ಕಾರ ಸ್ಪಂದಿಸಿಲ್ಲ‌. ಇದ್ರಿಂದ ವೈದ್ಯ ವಿದ್ಯಾರ್ಥಿಗಳು ಪರಿತಪಿಸುವಂತಾಗಿದೆ ಅಂತ ಪ್ರತಿಭಟನ ನಿರತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ರು.

ಇನ್ನಾದ್ರು ಸಂಭಂದಪಟ್ಟ ಅಧಿಕಾರಿಗಳು  ಎಚ್ಚೆತ್ತುಕೊಂಡು ವೇತನವನ್ನು ಬಿಡುಗಡೆಗೊಳಿಸಲು  ವಿದ್ಯಾರ್ಥಿಗಳು ಘೋಷಣೆಗಳನ್ನ ಕೂಗುತ್ತ ಆಗ್ರಹಿಸಿದರು.

Leave a Reply

Your email address will not be published.