ಆಸ್ಪತ್ರೆಯಲ್ಲೇ ಸಂಪುಟ ಸಭೆ ಕರೆದ ಗೋವಾ ಸಿಎಂ !


ಹೊಸದಿಲ್ಲಿ:ಅನಾರೋಗ್ಯಕ್ಕೆ ತುತ್ತಾಗಿ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಗೋವಾ ಮುಖ್ಯಮಂತ್ರಿ ಮನೋಹರ ಪರಿಕ್ಕರ , ಆಸ್ಪತ್ರೆಯಲ್ಲಿಯೇ ಸಚಿವ ಸಂಪುಟ ಕರೆದಿದ್ದಾರೆ !

ಸೆಪ್ಟೆಂಬರ್ 15 ರಂದು ಪರಿಕ್ಕರ ಏಮ್ಸ್ ಆಸ್ಪತ್ರೆಗೆ ದಾಖಲಾಗಿದ್ದು, ಆಸ್ಪತ್ರೆಯ ಇದೇ ಮೊದಲ ಬಾರಿ ಸಂಪುಟ ಸಭೆ ಕರೆದಿದ್ದಾರೆ.

ಶುಕ್ರವಾರ ನಡೆಯಲಿರುವ ಈ ಸಭೆಯಲ್ಲಿ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ, ಗೋವಾ ಫಾರ್ವರ್ಡ್ ಪಾರ್ಟಿ ಜತೆಗೆ ದೋಸ್ತಿ ಮಾಡಿಕೊಳ್ಳುವ ಕುರಿತು ಚರ್ಚೆ ನಡೆಯಲಿದೆ. ದೋಸ್ತಿ ಪಕ್ಷಗಳಿಗೆ ಯಾವ ಸಚಿವ ಸ್ಥಾನಗಳನ್ನು ನೀಡಬೇಕು ಎಂಬ ಕುರಿತಂತೆಯೂ ಸಭೆ ಚರ್ಚಿಸಲಿದೆ.

ಈ ಸಭೆಗೆ ಮುಖ್ಯಮಂತ್ರಿ ತಮ್ಮನ್ನು ಆಹ್ವಾನಿಸಿದ್ದು, ಬೇರೆ ಯಾರಿಗೆ ಆಹ್ವಾನ ನೀಡಿದ್ದಾರೆಯೋ ಗೊತ್ತಿಲ್ಲ ಎಂದು ಶಾಸಕ ಗೋವಿಂದ ಗಾವಡೆ ತಿಳಿಸಿದ್ದಾರೆ.

Leave a Reply

Your email address will not be published.