ಆರ್ . ಅಶೋಕ ಬಂದು ಮುತ್ತು ಕೊಡ್ತಾರಾ?: ವಿಶ್ವನಾಥ ವ್ಯಂಗ್ಯ !


ಮಂಡ್ಯ:  ನಾವಷ್ಟೇ ಅಪ್ಪಿಕೊಳ್ಳಲು ಸಾಧ್ಯವಿದೆ. ಇನ್ನೇನು ಆರ್. ಅಶೋಕ ಬಂದು ಮುತ್ತು ಕೊಡ್ತಾರಾ ?

ಹೀಗೆಂದು ವ್ಯಂಗ್ಯವಾಗಿ ಪ್ರಶ್ನಿಸಿದವರು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ . ವಿಶ್ವನಾಥ !

ಹೌದು, ಸಿದ್ಧರಾಮಯ್ಯ-ದೇವೇಗೌಡರದ್ದು ಧೃತರಾಷ್ಟ್ರನ  ಅಪ್ಪುಗೆ ಎಂದು ಹೇಳಿಕೆ ನೀಡಿದ್ದ ಮಾಜಿ ಡಿಸಿಎಂ ಅಶೋಕಗೆ ತಿರುಗೇಟು ನೀಡಿರುವ ವಿಶ್ವನಾಥ, ಅಶೋಕ ಬಂದು ಮುತ್ತು ಕೊಡುತ್ತಾರೆಯೇ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ಸರಕಾರದಿಂದ ಜನಸಾಮಾನ್ಯರಿಗೆ ತೊಂದರೆಯಾಗುತ್ತಿದೆ. ದಿನನಿತ್ಯದ ವಸ್ತುಗಳ ಬೆಲೆ ಏರುತ್ತಿವೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.

ಜನಸಾಮಾನ್ಯರನ್ನು ಮೋದಿ ದುರ್ಬಲಗೊಳಿಸುತ್ತಿದ್ದಾರೆ. ರೈತರ ಆತ್ಮಹತ್ಯೆ ವಿಚಾರದಲ್ಲಿ ಮೋದಿ ಏಕೆ ಮಾತನಾಡುತ್ತಿಲ್ಲ ಎಂದೂ ಅವರು ಪ್ರಶ್ನಿಸಿದರು.

Leave a Reply

Your email address will not be published.