ಅಬ್ಬಾ, ಎರಡು ತಿಂಗಳು 20 ರಜೆಗಳು !!


ಬೆಂಗಳೂರು: ಸರಕಾರಿ ನೌಕರರಿಗೆ ಈ ಎರಡು ತಿಂಗಳು ಭರ್ಜರಿ ರಜೆಗಳು ! ಅಕ್ಟೋಬರ್ -ನವೆಂಬರ್ ತಿಂಗಳೆರಡರಲ್ಲಿಯೇ ರವಿವಾರದ ರಜೆಯೂ ಸೇರಿ ಬರೋಬ್ಬರಿ 20 ದಿನಗಳ ರಜೆಯ ಸವಿಯನ್ನು ನೌಕರರು ಸವಿಯಲಿದ್ದಾರೆ.

ಬ್ಯಾಂಕುಗಳಿಗೂ ಈ ರಜೆಗಳು ಅನ್ವಯವಾಗುವುದರಿಂದ ಗ್ರಾಹಕರಿಗೆ ಕೊಂಚ ತೊಂದರೆಯಾಗಬಹುದು. ಸರಕಾರಿ ಕೆಲಸಗಳ ಮೇಲೂ ರಜೆಯ ಪರಿಣಾಮ ಉಂಟಾಗಲಿದೆ.

ಸದ್ಯ ಲಭ್ಯವಿರುವ ಮಾಹಿತಿ ಪ್ರಕಾರ ಇಂದು (ಅಕ್ಟೋಬರ್ 2) ಗಾಂಧಿ ಜಯಂತಿ ರಜೆಯಿಂದ ಶುರುವಾಗಿ 8 ರಂದು ಮಹಾಲಯ ಅಮವಾಸ್ಯೆ, 13 ಎರಡನೇ ಶನಿವಾರ,18-19 ಆಯುಧ ಪೂಜೆ-ವಿಜಯದಶಮಿ, 20 ರಂದು ಒಂದು ದಿನ ರಜೆ ಹಾಕಿದರೆ 21 ರವಿವಾರ. 24 ರಂದು ವಾಲ್ಮೀಕಿ ಜಯಂತಿ.

ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ. ನವೆಂಬರ್ 6 ನರಕ ಚತುರ್ದಶಿ, 8 ರಂದು ಬಲಿಪಾಡ್ಯಮಿ, 10 ಎರಡನೇ ಶನಿವಾರ. ನವೆಂಬರ್ 21 ರಂದು ಈದ್ ಮಿಲಾದ್, 26 ರಂದು ಕನಕದಾಸ ಜಯಂತಿ ರಜೆ. ಉಳಿದಂತೆ ನಾಲ್ಕು ರವಿವಾರದ ರಜೆಗಳು.

Leave a Reply

Your email address will not be published.