ಜಮಖಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಹಣ ಹಂಚಿದ ಶಾಸಕ ರಾಮದಾಸ

ಜಮಖಂಡಿಯಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ವೇಳೆ ಹಣ ಹಂಚಿದ ಶಾಸಕ ರಾಮದಾಸ


ಜಮಖಂಡಿ: ಉಪ ಚುನಾವಣೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ವೇಳೆ ಶಾಸಕ ಎಸ್ ಎ ರಾಮದಾಸ ಗಾಯಕರಿಗೆ ಹಣ ಹಂಚಿದ ಆರೋಪ ಕೇಳಿ ಬಂದಿದೆ.

ಜಮಖಂಡಿ ಉಪಚುನಾವಣೆ ಹಿನ್ನೆಲೆ ನಗರದಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ. ಆದರೆ ಶಾಸಕ ರಾಮದಾಸ
ಮನೆ ಮನೆ ಪ್ರಚಾರದ ವೇಳೆ ಇಬ್ಬರು ಗಾಯಕರಿಗೆ ಸನ್ಮಾನದ ಮಾಡಿ ಹಣ ನೀಡಿದ್ದಾರೆ.

ಈಟಿವಿ ಎದೆ ತುಂಬಿ ಹಾಡುವೆನು ಪ್ರೋಗ್ರಾಂಮ ನಲ್ಲಿ ಹಾಡಿ ಖ್ಯಾತಿ ಗಳಿಸಿದ ಗಾಯಕಿಯರಾದ ಶಾಂಭವಿ, ಭಾರ್ಗವಿ ಮನೆಗೆ ಭೇಟಿ ನೀಡಿದ್ದರು. ಈ ವೇಳೆ ಶಾಲು ಹೊದಿಸಿ ಸನ್ಮಾನ ಮಾಡಿ ಗಿಪ್ಟ್ ಕೊಡುವ ವೇಳೆ ಹಣ ನೀಡಿದ್ದಾರೆ.

ಶಾಸಕ ರಾಮದಾಸ ಅವರು ಹಣ ನೀಡಿ ಪೋಟೋ ವೈರಲ್ ಆಗಿವೆ.

ಯಾವುದೇ ಠಾಣೆಯಲ್ಲಿ ದೂರು ದಾಖಲಾಗಿಲ್ಲ.

Leave a Reply

Your email address will not be published.