ಪ್ರೊ. ಮಹೇಶ ಗಂವ್ಹಾರಗೆ ಪಿಎಚ್‍ಡಿ ಪ್ರದಾನ


ಕಲಬುರಗಿ: ಇಲ್ಲಿನ ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಎಂ.ಎಸ್. ಇರಾಣಿ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಮಹೇಶ ಎಂ. ಗಂವ್ಹಾರ ಅವರಿಗೆ ಗುಲ್ಬರ್ಗ ವಿಶ್ವವಿದ್ಯಾಲಯ ಪಿಎಚ್‍ಡಿ ಪದವಿ ನೀಡಿದೆ.

ಯಾದಗಿರಿ ಜಿಲ್ಲೆಯ ಸುರಪುರ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರಾಘವೇಂದ್ರ ಗುಡಗುಂಟಿ ಮಾರ್ಗದರ್ಶನದಲ್ಲಿ “ರೂರಲ್ ವುಮೆನ್ & ಹೆಲ್ತ್ ಎ ಕೇಸ್ ಸ್ಟಿಡಿ ಆಫ್ ಗುಲ್ಬರ್ಗ ಡಿಸ್ಟ್ರಿಕ್ಟ್” ಎಂಬ ವಿಷಯ ಕುರಿತು ಪ್ರಬಂಧ ಮಂಡನೆ ಮಾಡಿರುವುದಕ್ಕೆ ವಿವಿ ಡಾಕ್ಟರೇಟ್ ಪದವಿ ನೀಡಿದೆ.

ಮಹೇಶ ಗಂವ್ಹಾರ ಅವರು ಪಿಎಚ್‍ಡಿ ಪದವಿ ಪಡೆದಿರುವುದಕ್ಕೆ ಸಂಸ್ಥೆಯ ಅಧ್ಯಕ್ಷ ಡಾ. ಭೀಮಾಶಂಕರ ಬಿಲಗುಂದಿ, ಪ್ರಾಚಾರ್ಯ ಡಾ. ಸಿ. ಎಸ್. ಪಾಟೀಲ ಹಾಗೂ ಸಿಬ್ಬಂದಿವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published.