ಕೆಎಂಸಿ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದನ್ ಆಯ್ಕೆ


ಕಲಬುರಗಿ: ಆರೋಗ್ಯದರಿವಿನ ಭಾಗವಾಗಿ ವೈದ್ಯಕೀಯೇತರ ವ್ಯಕ್ತಿಗಳು ಜನಾರೋಗ್ಯ ಮತ್ತು ವೈದ್ಯ ವಿಜ್ಞಾನ ಕುರಿತು ಬರೆದ ಸುದ್ದಿಕಥನ ಮತ್ತು ಲೇಖನಗಳಿಗೆ ಕರ್ನಾಟಕ ಮೆಡಿಕಲ್ ಕೌನ್ಸಿಲ್ ( ಕೆಎಂಸಿ) ನೀಡುವ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಟಿ.ವಿ.ಶಿವಾನಂದನ್ ಆಯ್ಕೆಯಾಗಿದ್ದಾರೆ ಎಂದು ಕೌನ್ಸಿಲ್ ಅಧ್ಯಕ್ಷ ಡಾ. ಎಚ್. ವೀರಭದ್ರಪ್ಪ ತಿಳಿಸಿದ್ದಾರೆ.

ನ.೩ರಂದು ಬೆಂಗಳೂರಿನ ಕೆಎಂಸಿ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಟಿ.ವಿ.‌ ಶಿವಾನಂದನ್ ಅವರಿಗೆ ೧೦ ಸಾವಿರ ರೂ. ನಗದು ಹಾಗೂ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published.