ಕೊಪ್ಪಳ ಜಿಪಂ ಸದಸ್ಯೆ ಪತಿಯ ದರ್ಬಾರ್: ಎಇಇಗೆ ಧಮ್ಕಿ

ಕೊಪ್ಪಳ: ಟೆಂಡರ್ ಕಾಮಗಾರಿಯನ್ನು ತಾನು ಸೂಚಿಸಿದ ವ್ಯಕ್ತಿಗೆ ನೀಡಿಲ್ಲವೆಂದು ಆರೋ ಪಿಸಿ  ಜಿಲ್ಲಾ ಪಂಚಾಯಿತಿ ಸದಸ್ಯೆಯ ಪತಿಯೊಬ್ಬ ಎಇಇಗೆ ಧಮ್ಕಿ ಹಾಕಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್  ಆಗಿದೆ.

ಕೊಪ್ಪಳ ಜಿಲ್ಲೆ ಹಿರೇವಂಕಲಕುಂಟಾ ಕ್ಷೇತ್ರದ ಸದಸ್ಯೆ ಹೊಳೆಯಮ್ಮ ಎಂಬುವವರ ಪತಿ ಶೆರಣೆಗೌಡ ಎಂಬಾತ ಎಇಇ  ಯು, ಎಚ್. ಮಂಡಿಸೊಪ್ಪಿಗೆ ಅವಾಜ್ ಹಾಕಿದ್ದು, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ಕಾಮಗಾರಿ ಅಂಗ್ರಿಮೆಂಟ್ ತಮ್ಮ ಅಳಿಯ ಬಸವರಾಜ ಹೆಸರಿಗೆ ಮಾಡಿಲ್ಲವೆಂಬ ಕಾರಣಕ್ಕೆ  ಅಧಿಕಾರಿ ಮೇಲೆ ಧಮ್ಕಿ ಹಾಕಲಾಗಿದೆ ಎನ್ನಲಾಗುತ್ತಿದೆ. ಎಇಇಗೆ ಧಮ್ಕಿ ಹಾಕಿದ ದೃಶ್ಯವನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Leave a Reply

Your email address will not be published.