ಕೊಡಗು ಪ್ರವಾಹ ಪರಿಹಾರ: ರಾಜನಾಥಸಿಂಗ್ ಗೆ ಸಿಎಂ ಮನಿ


ಹೊಸದಿಲ್ಲಿ: ದೆಹಲಿ ಪ್ರವಾಸದಲ್ಲಿರುವ  ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ, ಸಚಿವ ಎಚ್. ಡಿ. ರೇವಣ್ಣ ಅವರು ಇಂದು ಕೇಂದ್ರ ಸಚಿವ ರಾಜನಾಥ್ ಸಿಂಗ್ ರನ್ನು  ಭೇಟಿ ಮಾಡಿ ಮಾತುಕತೆ ನಡೆಸಿದರು.

ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರವಾಹ ಪರಿಸ್ಥಿತಿ, ರಾಜ್ಯದ ಕೆಲವೆಡೆ ಉಂಟಾಗಿರುವ ಬರ, ಋಣಮುಕ್ತ ಕಾಯ್ದೆ ಮೊದಲಾದ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಪ್ರವಾಹ ಪರಿಸ್ಥಿತಿಯಿಂದಾಗಿ ರಾಜ್ಯದಲ್ಲಿ 3435 ಕೋಟಿ ರೂ. ಗಳಷ್ಟು ಹಾನಿ ಉಂಟಾಗಿದೆ. ಸಾಧ್ಯವಿದ್ದಷ್ಟು ಬೇಗನೇ ಎನ್ ಡಿ ಆರ್ ಎಫ್ ನಿಂದ ಪರಿಹಾರ ಕೊಡಿಸುವಂತೆ ಕುಮಾರಸ್ವಾಮಿ ರಾಜನಾಥಸಿಂಗ್ ಗೆ ಮನವಿ ಮಾಡಿದರು.

Leave a Reply

Your email address will not be published.