ಪಕ್ಷ ದ್ರೋಹಿಗಳಿಗೆ ಮುಂದಿನ ದಿನಗಳಲ್ಲಿ ತಕ್ಕ ಪಾಠ: ಜಿ.ಪಂ ಸದಸ್ಯೆ ಶಾಂತಲಾ ರಾಜಣ್ಣ


ಮಧುಗಿರಿ: ಪಕ್ಷದ್ರೋಹಿ ಹಾಗೂ ಬೆನ್ನಿಗೆ ಚೂರಿ ಹಾಕುವವರಿಗೆ ಕಾಂಗ್ರೆಸ್ ಪಕ್ಷ ಎಂದಿಗೂ ಮಣೆ ಹಾಕುವುದಿಲ್ಲ ಮುಂದಿನ ದಿನಗಳಲ್ಲಿ ನಡೆಯುವ ಚುನಾವಣೆಗಳ ಫಲಿತಾಂಶ  ವಿರೋಧಿಗಳಿಗೆ ಸಿದ್ಧ ಉತ್ತರ ಎಂದು ಎಪಿಎಂಸಿ ಚುನಾವಣೆಯ ಉಸ್ತುವಾರಿ ವಹಿಸಿದ್ದ ಜಿಲ್ಲಾ ಪಂಚಾಯಿತಿ ಸದಸ್ಯೆ ಎಸ್.ಆರ್.ಶಾಂತಲಾ ರಾಜಣ್ಣ ತಿಳಿಸಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಎಪಿಎಂಸಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳ ವಿಜಯೋತ್ಸವ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ  ಮಾತನಾಡಿ ಅವರು,  ಪುರಸಭೆಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ  ನಡೆಯುವ ಹಾಗೂ ಹಾಲು ಒಕ್ಕೂಟದ ಚುನಾವಣೆಗಳಲ್ಲಿಯೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳೆ ಆಯ್ಕೆಯಾಗಲಿದ್ದಾರೆ ಇವರ ಗೆಲುವಿಗಾಗಿ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮಿಸಬೇಕೆಂದು ಕರೆ ನೀಡಿದರು.

ಒಟ್ಟು 16 ಸದಸ್ಯರು ಇದ್ದಾರೆ ಇವರಲ್ಲಿ ಇತ್ತೀಚೆಗೆ ಜೆಡಿಎಸ್ ಪಕ್ಷದ ಬೆಂಬಲಿತರನ್ನು 3 ಜನ ಸದಸ್ಯರನ್ನು ನಾಮ ನಿರ್ದೇಶಿತರನ್ನಾಗಿ ಆಯ್ಕೆ ಮಾಡಿದ್ದರೂ ಕೂಡ ಜೆಡಿಎಸ್ ಪಕ್ಷದ ಬೆಂಬಲಿತರು ಸೋಲು ಅನುಭವಿಸಬೇಕಾಯಿತು. ಬರುವ ತುಮುಲ್ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಯಾಗಿ ನಾಗೇಶ್ ಬಾಬು ಸ್ಪರ್ಧಿಸುತ್ತಿದ್ದು ಮತ್ತೆ ನಮ್ಮ ಪಕ್ಷದವರೆ ಆಯ್ಕೆಯಾಗುವುದರಲ್ಲಿ ಯಾವುದೇ ಗೊಂದಲಗಳಿಲ್ಲ ಕೃಷಿ ಮಾರುಕಟ್ಟೆ ಚುನಾವಣೆಯಲ್ಲಿ ನಮ್ಮ ಬೆಂಬಲಿತ ಅಭ್ಯರ್ಥಿಗಳು ಬಹುಮತದಿಂದ ಆಯ್ಕೆಯಾಗಿದ್ದು ಅದೇ ರೀತಿ ನಾಗೇಶ್ ಬಾಬು ಜಯಬೇರಿ ಬಾರಿಸುವುದು ಖಚಿತ ಎಂದರು.

ಇದೇ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ  ನೂತನವಾಗಿ ಆಯ್ಕೆಯಾದ ಎಂ.ಬಿ ಮರಿಯಣ್ಣ ಹಾಗೂ ರಾಜಕುಮಾರ್‍ ಅವರನ್ನು  ಅಭಿನಂದಿಸಿದರು.

ಮಾಜಿ ತುಮುಲ್ ಅಧ್ಯಕ್ಷ ನಾಗೇಶ್ ಬಾಬು, ಪುರಸಭಾ ಮಾಜಿ ಅಧ್ಯಕ್ಷ ನಂಜುಂಡರಾಜು, ತಾ.ಪಂ ಅಧ್ಯಕ್ಷೆ ಇಂದಿರಾ ದೇನಾನಾಯ್ಕ್, ಎಪಿಎಂಸಿ ನಿರ್ದೇಶಕರಾದ ರಮಾಭಾಯಿ. ಪುರಸಭಾ ಸದಸ್ಯರಾದ ಎಂ.ಎಸ್.ಚಂದ್ರಶೇಖರ್, ನಟರಾಜು, ಆಲೀಂ, ಡಿಸಿಸಿ ಬ್ಯಾಂಕ್ ನಿರ್ದೇಶಕ ತಿಮ್ಮರಾಜು, ಮುಖಂಡರುಗಳಾದ ಶಂಕರ್ ನಾರಾಯಣ್ ಚಿಕ್ಕೋಬಳ ರೆಡ್ಡಿ ಇತರರು ಇದ್ದರು.

Leave a Reply

Your email address will not be published.