ಮಧುಗಿರಿ ಏಕಶಿಲಾ ಬೆಟ್ಟದಲ್ಲಿ ಎರಡು ಚಿರತೆ ಪ್ರತ್ಯಕ್ಷ: ಭಯ ಭೀತರಾದ ಜನರು


ಮಧುಗಿರಿ: ಏಕಶಿಲಾ ಬೆಟ್ಟದ ಸಮೀಪವಿರುವ 21 ವಾರ್ಡಿನ ಸಿಹಿನೀರು ಬಾವಿ ಬಳಿ ಎರಡು ಚಿರತೆಗಳು ಪ್ರತ್ಯಕ್ಷವಾಗಿರುವುದನ್ನು ಕಂಡು ವಾರ್ಡಿನ ನಾಗರೀಕರು ಭಯ ಭೀತರಾಗಿ ತಾವೇ ಖುದ್ದಾಗಿ ಬೆಟ್ಟ ಹತ್ತಿ ರಾತ್ರಿ ವೇಳೆ ಸಿಡಿ ಮದ್ದುಗಳನ್ನು ಸಿಡಿಸಿ ಚಿರತೆಗಳನ್ನು ಓಡಿಸುವ ಪ್ರಯತ್ನ ಮಾಡಿದ್ದಾರೆ.

ಪಟ್ಟಣದ 21 ವಾರ್ಡಿನ ಸಿಹಿನೀರು ಬಾವಿಯ ಬಳಿ ಸಂಜೆ ಎರಡು ಚಿರತೆಗಳು ಪ್ರತ್ಯಕ್ಷವಾಗಿವೆ. ಬೆಟ್ಟದ ಮೇಲೆ ಕುತಿರುತ್ತವೆ,  ಒಂದು ವಾರದಿಂದ ವಾರ್ಡಿನಲ್ಲಿರುವ ಮೇಕೆ, ನಾಯಿ,  ಹಂದಿಗಳ ಮೇಲೆ ದಾಳಿ ಮಾಡಿ ಹೊತ್ತು ಹೋಗುತ್ತಿವೆ.

ಚಿರತೆಗಳ ಉಪಟಳ ಹೆಚ್ಚಾಗಿದ್ದು, ಹಲವು ಬಾರಿ ಅರಣ್ಯಧಿಕಾರಿಗಳಿಗೆ ತಿಳಿಸಿದರು ಸಹ ಅವರು ಕೇವಲ ಸಿಡಿಮದ್ದುಗಳನ್ನು ಸಿಡಿಸಿ ಹೋಗುತ್ತಿದ್ದಾರಷ್ಟೆ ಆದರೆ ಇಲ್ಲಿಯವರೆಗೂ ಬೋನ್ ಇಟ್ಟು ಚಿರತೆಗಳನ್ನು ಹಿಡಿಯುವ ಪ್ರಯತ್ನ ಮಾಡಿಲ್ಲ.  ವಾರ್ಡಿನಲ್ಲಿ ಪ್ರತಿನಿತ್ಯ ಕುಡಿಯಲು ಸಿಹಿ ನೀರು ತರಲು ಸಾವಿರಾರು ಜನರು ಬರುತ್ತಿದ್ದಾರೆ.  ಚಿರತೆಗಳ ಹಾವಳಿಯಿಂದ ನೀರಿಗೆ  ಬರುವವರ ಸಂಖ್ಯೆ ಕಡಿಮೆಯಾಗಿದೆ, ನಾಗರೀಕರು ಮನೆ ಬಿಟ್ಟು ಹೊರ ಬರಲು ಭಯಪಡುವಂತಾಗಿದೆ.

ಕಳೆದ ಎರಡು ದಿನದ ಹಿಂದೆ ಮಂಜುನಾಥ್ ಎನ್ನುವವರ ಮನೆಯ ಮೇಲೆ ಚಿರತೆಯೊಂದು ಓಡಾಡಿದೆ. ರಕ್ತ ರುಚಿ ಕಂಡಿರುವ ಈ ಚಿರತೆಗಳು ನಮ್ಮ ಮೇಲೆ ದಾಳಿ ಮಾಡಿದರೆ ಏನುಗತಿ? ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ಚಿರತೆಗಳನ್ನು ಹಿಡಿದು ಕಾಡಿಗೆ ಬಿಡಬೇಕು ಮಾರುತಿ, ನಾಗರತ್ನಮ್ಮ, ಭಾಗ್ಯಮ್ಮ, ರಾಜಣ್ಣ, ನಾಗರಾಜು, ಮಲ್ಲೇಶ್, ಮಂಜುನಾಥ್, ನಾಗಪ್ಪ, ಮಲ್ಲೇಶ್, ನಾಗರಾಜು ನಾರಾಯಣಪ್ಪ, ಆದಿ,ಇಮ್ರಾನ್ ಮತ್ತಿತರರು ಎಂದು ಆಗ್ರಹಿಸಿದ್ದಾರೆ.

 

Leave a Reply

Your email address will not be published.