ಮಹಾಮೈತ್ರಿ: ಕಾಂಗ್ರೆಸ್ ಗೆ ಶಾಕ್ ಕೊಟ್ಟರಾ ಮಾಯಾವತಿ ?


ಹೊಸದಿಲ್ಲಿ: ಮುಂಬರುವ ಕೆಲವು ರಾಜ್ಯಗಳ ವಿಧಾನಸಭೆ ಚುನಾವಣೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮಹಾಮೈತ್ರಿ ಮಾಡಿಕೊಳ್ಳಬೇಕೆಂಬ ಬಿಜೆಪಿಯೇತರ ಪಕ್ಷಗಳಿಂದ ಬಹುಜನ ಸಮಾಜ ಪಾರ್ಟಿ ಹಿಂದಕ್ಕೆ ಸರಿದಿದೆ !

ಪ್ರಧಾನಿ ಮೋದಿ ಹಾಗೂ ಬಿಜೆಪಿ ವಿರುದ್ಧ ಒಗ್ಗಟ್ಟಿನ ಸಮರ ಸಾರಬೇಕೆಂದಿದ್ದ ಪಕ್ಷಗಳಿಗೆ ಈ ಮೂಲಕ ಹಿನ್ನಡೆ ಉಂಟಾಗಿದೆ.

ಚುನಾವಣೆಯಲ್ಲಿ ಕಾಂಗ್ರೆಸ್ ಜತೆ ದೋಸ್ತಿ ಮಾಡಿಕೊಳ್ಳುವುದಿಲ್ಲ ಎಂದು ಘೋಷಿಸುವ ಮೂಲಕ  ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ತಿ ಹಾಗೂ ಬಿಎಸ್ ಪಿ ಮುಖಂಡೆ ಮಾಯಾವತಿ, ಕಾಂಗ್ರೆಸ್ ಗೆ ಶಾಕ್ ನೀಡಿದ್ದಾರೆ.

ಮಹಾಮೈತ್ರಿಗೆ ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿ ಅವರ ವಿರೋಧವಿಲ್ಲವಾದರೂ ಕಾಂಗ್ರೆಸ್ ನ ಕೆಲವು ನಾಯಕರಿಗೆ ಬಿಎಸ್ ಪಿ ಯೊಂದಿಗಿನ ದೋಸ್ತಿ ಬಗ್ಗೆ ಅಸಮಾಧಾನವಿದೆ. ಕಾಂಗ್ರೆಸ್ಸಿನಲ್ಲಿ ಇನ್ನೂ ಕೆಲವರು ಜಾತಿವಾದಿಗಳಿರುವುದು ಗೊತ್ತಾಗಿದೆ. ಹೀಗಾಗಿ ಆ ಪಕ್ಷದೊಂದಿಗೆ ದೋಸ್ತಿ ಮಾಡಿಕೊಳ್ಳುವುದು ಆಗುವುದಿಲ್ಲ ಎಂದು ಮಾಯಾವತಿ ಹೇಳಿರುವುದು ಹೊಸ ರಾಜಕೀಯ ಬೆಳವಣಿಗೆಗೆ ನಾಂದಿ ಹಾಡಿದೆ.

Leave a Reply

Your email address will not be published.