ಪೆಟ್ರೋಲ್ , ಡೀಸೇಲ್ ದರ ರಾಜ್ಯದಲ್ಲಿ ಕೇವಲ 2.50 ರೂ. ಅಗ್ಗ ??


ಬೆಂಗಳೂರು; ಇತ್ತೀಚಿನ ದಿನಗಳಲ್ಲಿ ಇದೇ ಮೊದಲ ಬಾರಿ ಪೆಟ್ರೋಲ್ , ಡೀಸೇಲ್ ದರದಲ್ಲಿ 2.50 ರೂ. ಗಳಷ್ಟು ಇಳಿಕೆ ಮಾಡಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಪ್ರಕಟಿಸುವ ಜತೆಗೆ ರಾಜ್ಯ ಸರಕಾರಗಳೂ ಇಷ್ಟೇ ದರ  ಕಡಿತಗೊಳಿಸಬೇಕೆಂದು ಮನವಿ ಮಾಡಿದ್ದಾರೆ.

ಆದರೆ, ರಾಜ್ಯದಲ್ಲಿ 2.50 ರೂ. ದರ ಕಡಿಮೆ ಮಾಡುವುದು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ತೈಲ ದರದಲ್ಲಿ 2 ರೂ. ಕಡಿಮೆ ಮಾಡಿ ಇನ್ನೂ ತಿಂಗಳಾಗಿಲ್ಲ. ಈಗ ಮತ್ತೆ 2.50 ರೂ. ಕಡಿಮೆ ಮಾಡುವ ಕುರಿತಂತೆ ಸಭೆ ನಡೆಸಲಾಗುವುದು ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಹೀಗಾಗಿ ಸದ್ಯಕ್ಕೆ ರಾಜ್ಯದಲ್ಲಿ 2.50 ರೂ. ಮಾತ್ರ ಕಡಿಮೆಯಾಗಲಿದೆ ಎಂದು ಅಂದಾಜಿಸಲಾಗಿದೆ.

Leave a Reply

Your email address will not be published.