ಪೆಟ್ರೋಲ್ , ಡೀಸೇಲ್ ದರ ಐದು ರೂ. ಇಳಿಕೆ !


ಹೊಸದಿಲ್ಲಿ: ಇತ್ತೀಚಿನ ದಿನಗಳಲ್ಲಿ ತೀರಾ ಅಪರೂಪ ಎಂಬಂತೆ ಪೆಟ್ರೋಲ್ ಮತ್ತು ಡೀಸೇಲ್ ಬೆಲೆಗಳಲ್ಲಿ ಇಳಿಕೆಯಾಗಿದೆ.

ಪೆಟ್ರೋಲ್ ಮತ್ತು ಡೀಸೇಲ್ ದರಗಳಲ್ಲಿ ಇಂದಿನಿಂದಲೇ ಜಾರಿಗೆ ಬರುವಂತೆ 2.50 ರೂ. ಕಡಿಮೆಯಾಗಲಿದೆ ಎಂದು ವಿತ್ತ ಸಚಿವ ಅರುಣ ಜೈಟ್ಲಿ ನವದೆಹಲಿಯಲ್ಲಿ ಪ್ರಕಟಿಸಿದ್ದಾರೆ.

ತೈಲಕಂಪನಿಗಳು ಒಂದು ರೂ. ದರ ಕಡಿಮೆ ಮಾಡಲಿದ್ದು, ಕೇಂದ್ರ ಸರಕಾರ 2.50 ರೂ. ಕಡಿಮೆ ಮಾಡಿದೆ. ಎಲ್ಲಾ ರಾಜ್ಯ ಸರಕಾರಗಳೂ ಇಷ್ಟೇ (2.50 ರೂ.) ಕಡಿಮೆ ಮಾಡಬೇಕೆಂದೂ ಅವರು ಸೂಚಿಸಿದರು. ಅಲ್ಲಿಗೆ ಪೆಟ್ರೋಲ್ ಮತ್ತು ಡೀಸೇಲ್ ದರದಲ್ಲಿ ಐದು ರೂ. ಕಡಿತವಾದಂತಾಗಿದೆ.

ಮುಂಬರುವ ದಿನಗಳಲ್ಲಿ ತೈಲ ಬೆಲೆಯನ್ನು ಇನ್ನಷ್ಟು ತಗ್ಗಿಸಲಾಗುವುದು ಎಂದೂ ಜೈಟ್ಲಿ ಹೇಳಿದ್ದಾರೆ.

Leave a Reply

Your email address will not be published.