ಶಾಸ್ತ್ರಿ, ಗಾಂಧಿಗೆ ಮೋದಿ ನಮನ


ಹೊಸದಿಲ್ಲಿ:ಮಾಜಿ ಪ್ರಧಾನಿ ಲಾಲ್ ಬಹದ್ದೂರ ಶಾಸ್ತ್ರಿ ಅವರ 114 ನೇ ಜನ್ಮದಿನದ ಪ್ರಯುಕ್ತ ಪ್ರಧಾನಿ ನರೇಂದ್ರ ಮೋದಿ ಅವರು ವಿಜಯ  ಘಾಟ್ ನಲ್ಲಿ ನಮನ ಸಲ್ಲಿಸಿದರು.

ಲಾಲ್ ಬಹದ್ದೂರ ಶಾಸ್ತ್ರಿ ಅವರು ಅತ್ಯುತ್ತಮ ವ್ಯಕ್ತಿತ್ವ ಅಪರೂಪದ ರಾಜಕೀಯ ನೇತಾರರಾಗಿದ್ದರು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಇದಕ್ಕೂ ಮುನ್ನ ಮಹಾತ್ಮಾ ಗಾಂಧಿಯವರ 149 ನೇ ಜನ್ಮದಿನದ ಅಂಗವಾಗಿ ಅವರ ಸಮಾಧಿಗೂ ಮೋದಿ ನಮನ ಸಲ್ಲಿಸಿದರು. ನಂತರ ಅವರು ಟ್ವೀಟ್ ಮಾಡಿ, ಇಂದಿನಿಂದ ನಾವು ಬಾಪೂಜಿ ಅವರ 150 ನೇ ವರ್ಷಾಚರಣೆಗೆ ಪಾದಾರ್ಪಣೆ ಮಾಡುತ್ತಿದ್ದೇವೆ. ಅವರ ಆಶೋತ್ತರಗಳನ್ನು ಈಡೇರಿಸುವ ಅವಕಾಶ ಸಿಕ್ಕಿರುವುದು ತುಂಬ ಸಂತಸ ತಂದಿದೆ ಎಂದು ಹೇಳಿದ್ದಾರೆ.

 

Leave a Reply

Your email address will not be published.