ಹಳಿ ದಾಟುವಾಗ ರೈಲು ಹಾಯ್ದು ಐವರ ದುರ್ಮರಣ !


ಕೈಮೂರ (ಬಿಹಾರ): ರೈಲಿನಿಂದ ಇಳಿದು ಹಳಿ ದಾಟುತ್ತಿದ್ದ ವೇಳೆ ಮತ್ತೊಂದು ರೈಲಿಗೆ ಸಿಲುಕಿ ಐವರು ಸಾವಿಗೀಡಾಗಿರುವ ದಾರುಣ ಘಟನೆ ಬಿಹಾರದ ಭಾಬುವಾ ನಿಲ್ದಾಣದಲ್ಲಿ ನಿನ್ನೆ ಸಂಜೆ ನಡೆದಿದೆ.

ವಾರಾಣಾಸಿ-ರಾಂಚಿ ರೈಲಿನಲ್ಲಿ ಪ್ರಯಾಣಿಸಿ ಭಾಬುವಾ ನಿಲ್ದಾಣಕ್ಕೆ ಬಂದಿಳಿದ ಮೂವರು ಮಹಿಳೆಯರು , ಒಂದು ಮಗು ಸೇರಿದಂತೆ ಐವರು, ಹಳಿ ದಾಟುತ್ತಿದ್ದ ಸಂದರ್ಭದಲ್ಲಿ ನಿಲ್ದಾಣದಲ್ಲಿ ನಿಲುಗಡೆಯಾಗದ ಹೌರಾ-ಲಾಲ್ ಕಾನ್  ಸೂಪರ್ ಫಾಸ್ಟ್ ಎಕ್ಸಪ್ರೆಸ್ ರೈಲಿಗೆ ಸಿಲುಕಿ ದಾರುಣವಾಗಿ ಸಾವಿಗೀಡಾದರು ಎಂದು ಮೂಲಗಳು ತಿಳಿಸಿವೆ.

ಘಟನೆ ಕುರಿತಂತೆ ಹೆಚ್ಚಿನ ವಿವರಗಳು ಬರಬೇಕಿದೆ.

Leave a Reply

Your email address will not be published.