ದಕ್ಷಿಣ ಒಳನಾಡಿನಲ್ಲಿ ಇಂದಿನಿಂದ ಭಾರೀ ಮಳೆ ಸಾಧ್ಯತೆ


ಬೆಂಗಳೂರು:ರಾಜ್ಯದ ದಕ್ಷಿಣ ಒಳನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಇಂದಿನಿಂದ 9 ನೇ ತಾರೀಖಿನವರೆಗೂ ಭಾರೀ ಮಳೆಯಾಗುವ ನಿರೀಕ್ಷೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಇಂದು ಸಂಜೆ ವೇಳೆಗೆ 40 ರಿಂದ 50 ಕಿ.ಮೀ ವೇಗದಲ್ಲಿ ಕರಾವಳಿ ಪ್ರದೇಶಗಳಲ್ಲಿ ಗಾಳಿ ಬೀಸುವ ಮುನ್ಸೂಚನೆ ಇದ್ದು, ಲಕ್ಷದ್ವೀಪದಿಂದ ಕರಾವಳಿ ಪ್ರದೇಶದವರೆಗೆ ಭಾರೀ ಎತ್ತರದ ಅಲೆಗಳು ಏಳಲಿವೆ ಎಂದೂ ಇಲಾಖೆ ತಿಳಿಸಿದೆ.

ಮೀನುಗಾರರು ಸಮುದ್ರಕ್ಕೆ ಇಳಿಯದಂತೆಯೂ ಸೂಚನೆ ನೀಡಿರುವ ಇಲಾಖೆ ಅಧಿಕಾರಿಗಳು ಆಳ ಸಮುದ್ರ ಮೀನುಗಾರಿಕೆಗೆ ಹೋಗಿರುವವರು ಶುಕ್ರವಾರ ಸಂಜೆ ಒಳಗೆ ವಾಪಸ್ ಆಗುವಂತೆ ಸಲಹೆ ಮಾಡಿದ್ದಾರೆ.

Leave a Reply

Your email address will not be published.