ರಾಮದುರ್ಗ: ಮಾಜಿ ನಗರಾಧ್ಯಕ್ಷ ಬಿ.ವ್ಹಿ.ಪಟ್ಟಣಶೆಟ್ಟಿ ನಿಧನ


ರಾಮದುರ್ಗ : ಪಟ್ಟಣದ ಹಿರಿಯ ನ್ಯಾಯವಾದಿ,ಮಾಜಿ ನಗರಾಧ್ಯಕ್ಷ ಬಿ.ವ್ಹಿ.ಪಟ್ಟಣಶೆಟ್ಟಿ (91)  ಇಂದು ನಿಧನ ಹೊಂದಿದರು.
ವಕೀಲರಾಗಿ 62 ವರ್ಷ  ಕಾರ್ಯ ನಿರ್ವಹಿಸಿದ್ದ ಅವರನ್ನು  ಮೂರ್ನಾಲ್ಕು ತಿಂಗಳ ಹಿಂದೆಯಷ್ಟೆ ರಾಮದುರ್ಗ ನ್ಯಾಯಾಲಯದಲ್ಲಿ ಬೀಳ್ಕೊಡಲಾಗಿತ್ತು.

ಕಳೆದ ವಾರ ಅವರನ್ನು ಬೆಳಗಾವಿಯ ಲೇಕ್ ವ್ಯೂ ಆಸ್ಪತ್ರೆಗೆ ಸೇರಿಸಲಾಗಿತ್ತು. 1960 ರಿಂದ 1968 ರವರೆಗೆ ದಿವಂಗತರು ರಾಮದುರ್ಗ ಪುರಸಭೆಯ ಅಧ್ಯಕ್ಷರಾಗಿದ್ದರು.ದಿ.ಬಿ.ಎಸ್.ಮುಚ್ಚಂಡಿ,ದಿ.ಯಂಕಪ್ಪ ಚಂದರಗಿ ಅವರು ಪಟ್ಟಣಶೆಟ್ಟಿ ಅವರ ನಿಕಟವರ್ತಿಯಾಗಿದ್ದರು.
ರಾಮದುರ್ಗದ ಹಿರಿಯರು ಹಾಗೂ ಬುದ್ಧಿಜೀವಿ ಎನಿಸಿಕೊಂಡಿದ್ದ ಪಟ್ಟಣಶೆಟ್ಟಿಯವರಿಗೆ ಪತ್ನಿ ಮತ್ತು ಇಬ್ಬರು ಪುತ್ರಿಯರು ಇದ್ದಾರೆ. ಜಿಲ್ಲೆಯ ಅನೇಕ ಹಿರಿಯ ರಾಜಕೀಯ ಮುಖಂಡರು ದಿವಂಗತರ ನಿಕಟ ಸಂಪರ್ಕದಲ್ಲಿದ್ದರು.

Leave a Reply

Your email address will not be published.