ಸರ ಸರನೆ ವಿದ್ಯುತ್ ಕಂಬ ಏರಿದರು ಸರಳಾ ಹೇರೇಕರ್ !!: ವಿಡಿಯೋ

 


ಬೆಳಗಾವಿ : ಅಧಿಕಾರಿಗಳು ಸಮಸ್ಯೆಗೆ ಸ್ಪಂದಿಸದಿದ್ದರೆ ಜನಪ್ರತಿನಿಧಿಗಳು ಏನು ಮಾಡುತ್ತಾರೆ ?

ಧರಣಿ ನಡೆಸುತ್ತಾರೆ, ಉಪವಾಸ ಮಾಡುತ್ತಾರೆ, ಘೋಷಣೆ ಕೂಗುತ್ತಾರೆ…. ಎಂದೆಲ್ಲ ನೀವು ಉತ್ತರಿಸಬಹುದು.

ಆದರೆ, ಬೆಳಗಾವಿಯ ನಗರಸೇವಕಿಯೊಬ್ಬರು ವಿದ್ಯುತ್ ಕಂಬ ಏರುವ ಮೂಲಕ ಪ್ರತಿಭಟನೆ ನಡೆಸಿ ಎಲ್ಲರೂ ಹುಬ್ಬೇರುವಂತೆ ಮಾಡಿದ್ದಾರೆ.

ಹೌದು,  ಬೆಳಗಾವಿ ಮಹಾನಗರಪಾಲಿಕೆಯ 41 ನೇ ವಾರ್ಡಿನ ಸದಸ್ಯೆ ಸರಳಾ ಹೇರೇಕರ್ ಸರ ಸರನೆ ವಿದ್ಯುತ್ ಕಂಬ ಏರುವ ಮೂಲಕ ಪಾಲಿಕೆ ಅಧಿಕಾರಿಗಳ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದ್ದಾರೆ !

ಸದಾಶಿವ ನಗರದ ಅನೇಕ ಕಡೆಗಳಲ್ಲಿ ಬೀದಿ ದೀಪಗಳಿಲ್ಲ, ಹೈಮಾಸ್ಕ್ ದೀಪ ಹಾಳಾಗಿ ಹಲವು  ದಿನಗಳೇ ಕಳೆದಿವೆ. ಈ ವಿಷಯವನ್ನು ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜವಾಗಿಲ್ಲ ಎಂದು ಆರೋಪಿಸಿ  ಸರಳಾ ಈ ವಿನೂತನ ಪ್ರತಿಭಟನೆ ನಡೆಸಿದರು.

ವಿಷಯ ತಿಳಿದು ಎಪಿಎಂಸಿ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಪಾಲಿಕೆ ಸದಸ್ಯೆ ಮನವೊಲಿಸಲು ಹರಸಾಹಸ ಪಡಬೇಕಾಯಿತು. ಬಳಿಕ  ಪಾಲಿಕೆ ಆಯುಕ್ತ ಶಶಿಧರ್ ಕುರೇರ್ ಸ್ಥಳಕ್ಕೆ ಭೇಟಿ ನೀಡಿ  ಮನವಿಗೆ ಸ್ಪಂದಿಸುವುದಾಗಿ ಭರವಸೆ ಕೊಟ್ಟ ನಂತರ ಸರಳಾ ಅಷ್ಟೇ ಸರಸರನೇ ಕೆಳಗೆ ಇಳಿದರು.

Leave a Reply

Your email address will not be published.