ರಾಣಿ ಚೆನ್ನಮ್ಮ ವಿವಿ ಕೇಸರೀಕರಣಗೊಳ್ಳಲು ಬಿಡುವುದಿಲ್ಲ; ಸತೀಶ ಜಾರಕಿಹೊಳಿ ಗುಡುಗು


ಬೆಳಗಾವಿ: ಇಲ್ಲಿಯ ಪ್ರತಿಷ್ಠಿತ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವನ್ನು ಕೇಸರೀಕರಣ ಮಾಡಲು ಬಿಡುವುದಿಲ್ಲ ಎಂದು ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಗುಡುಗಿದ್ದಾರೆ.

ವಿಶ್ವವಿದ್ಯಾಲಯದ ಆವರಣದಲ್ಲಿ ಮೊನ್ನೆ ನಡೆದ ಘಟನೆಗೆ ಸಂಬಂಧಿಸಿದಂತೆ ಇಂದು ತಮ್ಮನ್ನು ಭೇಟಿ ಮಾಡಿದ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು , ಆ ದಿನ ಅಲ್ಲಿ ನಮ್ಮ ಕಾರ್ಯಕರ್ತರಾರೂ ಗಲಾಟೆ ಮಾಡಿಲ್ಲ. ಮಾತಿನ ಭರದಲ್ಲಿ ಸ್ವಲ್ಪ ನೂಕು ನುಗ್ಗಲು ಉಂಟಾಗಿದೆ ಅಷ್ಟೇ ಎಂದು ಸಮಜಾಯಿಷಿ ನೀಡಿದರು.

ಸಿಂಡಿಕೇಟ್ ಸದಸ್ಯ ರಾಜು ಚಿಕ್ಕನಗೌಡರ ಮತ್ತು ಕೆಲವರು ಸೇರಿಕೊಂಡು  ವಿಶ್ವವಿದ್ಯಾಲಯವನ್ನು ಕೇಸರೀಮಯ ಮಾಡಲು ಹೊರಟಿದ್ದಾರೆ. ನಾವು ಇದರ ವಿರುದ್ಧ ಹೋರಾಟ ಮಾಡುತ್ತೇವೆ. ಕೇಸರೀಕರಣದ ವಿರುದ್ಧದ ಹೋರಾಟ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಹೇಳಿದರು.

ಕುಲಪತಿ ಶಿವಾನಂದ ಹೊಸಮನಿ ಅವರ ಜತೆಗೆ ನಮ್ಮದೇನೂ ತಕರಾರಿಲ್ಲ. ನಮ್ಮ ತಕರಾರು ಏನಿದ್ದರೂ ರಾಜು ಚಿಕ್ಕನಗೌಡರ ಧೋರಣೆ ವಿರುದ್ದ ಎಂದು ಸ್ಪಷ್ಟಪಡಿಸಿದ ಜಾರಕಿಹೊಳಿ, ವಿಶ್ವವಿದ್ಯಾಲಯದ ನೇಮಕದಲ್ಲೂ ತಾರತಮ್ಯ ಧೋರಣೆ ತೋರಿಸಲಾಗುತ್ತಿದ್ದು , ಸಿಕ್ಕಾಪಟ್ಟೆ ಅವ್ಯವಹಾರ ನಡೆಯುತ್ತಿದೆ. ಇದರಿಂದ ಜನ ರೋಸಿ ಹೋಗಿದ್ದಾರೆ ಎಂದು ಕಿಡಿಕಾರಿದರು.

ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಪ್ರಶ್ನಿಸಲು ನಮ್ಮ ಬೆಂಬಲಿಗರು ತೆರಳಿದ್ದರೇ ಹೊರತು ಗದ್ದಲ ಮಾಡಲು ಅಲ್ಲವೇ ಅಲ್ಲ ಎಂದು ಅವರು ಹೇಳಿದರು.

ಕೇಸರಿಕರಣಗೊಳಿಸುವುದನ್ನು ನಿಲ್ಲಿಸದೇ ನಮ್ಮ ವಿರುದ್ಧ ಪ್ರತಿಭಟನೆಗೆ ಇಳಿದರೆ ನಾವೂ ಪ್ರತಿಭಟನೆ ಮಾಡಬೇಕಾಗುತ್ತದೆ. ಅವರು ರಾಜಕಾರಣ ಮಾಡಹೊರಟರೆ ನಾವೂ ರಾಜಕಾರಣ ಮಾಡಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದರು.

2 Responses to "ರಾಣಿ ಚೆನ್ನಮ್ಮ ವಿವಿ ಕೇಸರೀಕರಣಗೊಳ್ಳಲು ಬಿಡುವುದಿಲ್ಲ; ಸತೀಶ ಜಾರಕಿಹೊಳಿ ಗುಡುಗು"

  1. Sunil madhale   October 3, 2018 at 9:18 pm

    Right Namma jilleya janarege udoya or PhD course gey apply madi exam kottaru Saha exam na key ans omr sheet iddannu nedodillla yake nanu besttu PhD hopes Bittu bittey sir. Evarigey sariyagi Patha kalisi

    Reply
  2. Saleem J.Amaljeri   October 3, 2018 at 11:04 pm

    Desh d yallkade intha prthibathane madbeku. Deshvannu secullaragiye ulisbeku illadidare deshdalli vatavarn hedaged bahudu..

    Reply

Leave a Reply

Your email address will not be published.