ಸಂಪುಟ ವಿಸ್ತರಣೆ: ಸಿದ್ದು ಹೇಳಿದವರೇ ಸಚಿವರಾಗ್ತಾರಂತೆ !


ಬೆಂಗಳೂರು: ಜೆಡಿಎಸ್ -ಕಾಂಗ್ರೆಸ್ ದೋಸ್ತಿ ಸರಕಾರದ ಎರಡನೇ ಹಂತದ ಸಂಪುಟ ವಿಸ್ತರಣೆಯ ಮುಹೂರ್ತ ಸಮೀಪವಾಗುತ್ತಿದ್ದಂತೆಯೇ ಇದೀಗ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರತ್ತ ಎಲ್ಲರ ಚಿತ್ತ ಹರಿದಿದೆ.

ಸಿದ್ದರಾಮಯ್ಯ ಸೂಚಿಸಿದ ಶಾಸಕರಿಗೆ ಮಂತ್ರಿಗಿರಿ ದೊರಕಲಿದೆ ಎಂಬ ಕಾರಣಕ್ಕೆ ಸಿದ್ದು ಈಗ ಕಿಂಗ್ ಮೇಕರ್ ಸ್ಥಾನ ಏರಿ ಕುಳಿತಿದ್ದಾರೆ.

ಅಸಮಾಧಾನಗೊಂಡಿರುವ ಶಾಸಕರ ಸಿಟ್ಟನ್ನು ಶಮನಗೊಳಿಸಲು ಸಿದ್ದರಾಮಯ್ಯನವರೇ ಬರೋಬ್ಬರಿ ಎಂಬುದು ಕಾಂಗ್ರೆಸ್ ಹೈ ಕಮಾಂಡ್ ಗೆ ಈಗ ಮನವರಿಕೆಯಾಗಿದ್ದು, ಹೀಗಾಗಿ ಸಿದ್ದರಾಮಯ್ಯನವರ ಹೆಗಲಿಗೆ ಸಿಟ್ಟು ತಣಿಸುವ ಹೊಣೆ ಹೊರಿಸಲಾಗಿದೆ.

ಈ ಹಿಂದಿನ ಸಂಪುಟ ವಿಸ್ತರಣೆ ಕಾಲಕ್ಕೆ ಸಿದ್ದರಾಮಯ್ಯ ಅವರನ್ನು ಹೊರಕ್ಕಿಡಲಾಗಿತ್ತು. ಇತ್ತೀಚೆಗೆ ಜಾರಕಿಹೊಳಿ ಬ್ರದರ್ಸ್ , ಶಾಸಕ ನಾಗೇಂದ್ರ ಮೊದಲಾದವರ ಭಿನ್ನಮತವನ್ನು ಶಮನಮಾಡುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿರುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಚಾರದಲ್ಲಿಯೂ ಭಿನ್ನಮತ ಶಮನದ ಜವಾಬ್ದಾರಿ ಕೊಡಲು ಹೈಕಮಾಂಡ್ ಮುಂದಾಗಿದೆ ಎಂದು ಹೇಳಲಾಗಿದೆ.

Leave a Reply

Your email address will not be published.