ಜನಾರ್ದನರೆಡ್ಡಿ ಮನುಷ್ಯತ್ವ ಇಲ್ಲದ ವ್ಯಕ್ತಿ ಎಂದು ಜರಿದ್ರು ಸಿದ್ರಾಮಯ್ಯ !


ಶಿವಮೊಗ್ಗ: ಮಾಜಿ ಸಚಿವ ಜನಾರ್ದನ ರೆಡ್ಡಿ ಸಂಸ್ಕೃತಿ, ಮಾನವೀಯತೆ ಇಲ್ಲದ ವ್ಯಕ್ತಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಶಿವಮೊಗ್ಗದಲ್ಲಿ ರೆಡ್ಡಿ ವಿರುದ್ಧ  ತೀವ್ರ ವಾಗ್ದಾಳಿ ನಡೆಸಿದ ಅವರು, ಕುಟುಂಬದ ಬಗ್ಗೆ ಮಾತನಾಡುವುದು ಎಂತಹ ಸಂಸ್ಕೃತಿ ಎಂದು ಪ್ರಶ್ನಿಸಿದರು. ಜನಾರ್ದನರೆಡ್ಡಿ ಏನು ರಾಜವಂಶಸ್ಥರೇ ಎಂದೂ ಅವರು ಕುಟುಕಿದರು.

ಶಿವಮೊಗ್ಗ ಕ್ಷೇತ್ರದಲ್ಲಿ ಬಿ.ವೈ, ರಾಘವೇಂದ್ರ ಆರಿಸಿ ಬಂದರೆ ಸರಕಾರ ಬದಲಾಗುತ್ತೆ ಅಂತಾರೆ. ಬಿಜೆಪಿಯವರ ಕೈಯಲ್ಲಿ ಏನಾದರೂ ಮಂತ್ರದಂಡವಿದೆಯಾ? ಇದ್ದರೆ ಅದು ಏಕೆ ವರ್ಕೌಟ್ ಆಗುತ್ತಿಲ್ಲ  ಎಂದು ಕೇಳಿದರು.

ಜನಾರ್ದನರೆಡ್ಡಿ ಮಗಳ ಮದುವೆ ಹೇಗೆ ಮಾಡಿದರು? ನಾನು 40 ವರ್ಷವಾದರೂ ಮೈಸೂರಿನಲ್ಲಿ ಮನೆ ಕಟ್ಟಲು ಸಾಧ್ಯವಾಗಿಲ್ಲ ಎಂದೂ ಅವರು ಹೇಳಿದರು.

Leave a Reply

Your email address will not be published.