ರಾಣಿ ಚೆನ್ನಮ್ಮ ವಿವಿ ಗಲಾಟೆ: ಸಿದ್ದು ಸುಣಗಾರ ಹೇಳಿದ್ದೇನು ಗೊತ್ತಾ?ಬೆಳಗಾವಿ: ನಮ್ಮ ಶಾಸಕರು, ಸಂಸದರನ್ನು ವಿಶ್ವವಿದ್ಯಾಲಯ ಕಾರ್ಯಕ್ರಮಗಳಿಗೆ ಏಕೆ ಕರೆದಿಲ್ಲ ಎಂದು ಕೇಳುವುದು ತಪ್ಪೇ ? ಎಂದು ಜಿಲ್ಲಾ ಪಂಚಾಯ್ತಿ ಸದಸ್ಯ ಸಿದ್ದು ಸುಣಗಾರ ಪ್ರಶ್ನಿಸಿದ್ದಾರೆ.

ಸ್ಥಳೀಯ ಪ್ರತಿನಿಧಿಗಳನ್ನು ಕರೆಯದೇ ಸಂಬಂಧವಿಲ್ಲದವರನ್ನು ಏಕೆ ಕರೆಯುತ್ತೀರಿ ಎಂದು ಪ್ರಶ್ನಿಸಲು ನಾವು ಮತ್ತು  ನಮ್ಮ ಕಾರ್ಯಕರ್ತರು ವಿಶ್ವವಿದ್ಯಾಲಯದ ಕುಲಪತಿ ಬಳಿಗೆ ಹೋಗಿದ್ದಾಗ ಅವರು ಸರಿಯಾಗಿ ಸ್ಪಂದಿಸಲಿಲ್ಲ ಎಂದು ಅವರು ಸೋಮವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ದೂರಿದರು.

ವಿಶ್ವವಿದ್ಯಾಲಯದ ಹೊರಗೆ ಅರ್ಧ ಗಂಟೆಗೂ ಹೆಚ್ಚು ಹೊತ್ತು ಕಾಯ್ದರೂ ಕುಲಪತಿ ಚರ್ಚೆಗೆ ಬರಲಿಲ್ಲ. ಹಾಗಾದರೆ ನಾವೇ ಒಳಹೋಗಿ ಮಾತನಾಡಿಸಿದರಾಯಿತು ಎಂದು ಒಳಹೊರಟಾಗ ಕಾರ್ಯಕರ್ತರು ಮತ್ತು ಭದ್ರತಾ ಸಿಬ್ಬಂದಿ ನಡುವೆ ತಳ್ಳಾಟ -ನೂಕಾಟ ಉಂಟಾಯಿತು ಎಂದು ಅವರು ಸ್ಪಷ್ಟಪಡಿಸಿದರು.

ಭದ್ರತಾ ಸಿಬ್ಬಂದಿ ಸುಖಾಸುಮ್ಮನೆ ನಮ್ಮ ಮೇಲೆ ಹಲ್ಲೆಗೆ ಬಂದಿದ್ದನ್ನೂ ನಾವು ಪ್ರಶ್ನಿಸಬಾರದಾ ? ಎಂದೂ ಅವರು ಕೇಳಿದರು.

ಬಹುಹೊತ್ತಿನ ನಂತರ ಕುಲಪತಿ ನಮ್ಮೊಂದಿಗೆ ಚರ್ಚೆ ನಡೆಸಿ ಆಹ್ವಾನ ನೀಡುವುದಾಗಿ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

Leave a Reply

Your email address will not be published.