ಟೋಲ್ ಕೊಡಲು ಕ್ಯಾತೆ ತೆಗೆದ ಮಹಾರಾಷ್ಟ್ರ ರೈತರು !


ಬೆಳಗಾವಿ: ಟೋಲ್ ಹಣ ನೀಡುವುದಿಲ್ಲ ಎಂದು ಮಹಾರಾಷ್ಟ್ರ ರೈತರು ಹತ್ತರಗಿ ಟೋಲ್ ಗೇಟ್ ಬಳಿ ಗದ್ದಲ ಎಬ್ಬಿಸಿದ ಪ್ರಸಂಗ ಶನಿವಾರ ನಡೆಯಿತು.

ಹುಕ್ಕೇರಿ ತಾಲೂಕಿನ ಹತ್ತರಗಿ ಟೋಲ್ ಸಿಬ್ಬಂದಿ ಜತೆ ವಾಗ್ವಾದಕ್ಕಿಳಿದಿರುವ ರೈತರು ಟೋಲ್ ನೀಡಲು ನಿರಾಕರಿಸುತ್ತಿದ್ದಾರೆ.

ಮಹಾರಾಷ್ಟ್ರದ ಜಯಸಿಂಗ್ ಪುರದಲ್ಲಿ ಆಯೋಜಿಸಿರುವ ರೈತ ಸಮಾವೇಶದಲ್ಲಿ ಪಾಲ್ಗೊಳ್ಳಲು ಚಂದಗಡ ತಾಲೂಕಿನಿಂದ ಹೊರಟಿರುವ ರೈತರು ಈ ಕ್ಯಾತೆ ತೆಗೆದಿದ್ದಾರೆ.

ಕಳೆದ ಒಂದು ಗಂಟೆಯಿಂದ ಟೋಲ್ ಸಿಬ್ಬಂದಿ ಮತ್ತು  ಮಹಾರಾಷ್ಟ್ರ ರೈತರ ನಡುವೆ ಮಾತಿನ ಚಕಮಕಿ ನಡೆದಿದ್ದು,  ಟ್ರಾಫಿಕ್ ಜಾಮ್  ಆಗಿದೆ. ಸಂಕೇಶ್ವರ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.

Leave a Reply

Your email address will not be published.