ಪಕ್ಷದ ಹೆಮ್ಮೆಯ ಸಾಧನೆಗಳನ್ನು ಜನರಿಗೆ ತಿಳಿಸುವ ಕಾರ್ಯ‌‌ ಮಾಡಿ: ಶಶಿಕಲಾ‌ಮೂರ್ತಿ

 


ದಾವಣಗೆರೆ: ಬೂತ್ ಮಟ್ಟದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮನವಿಗೆ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಶಾಸಕರು ಮತ್ತು ಪಕ್ಷದ ಹಿರಿಯ ಮುಖಂಡರು ಸ್ಪಂದನೆ ನೀಡುವ ಮುಖಾಂತರ ತಳಮಟ್ಟದ ದಲ್ಲಿ ಪಕ್ಷವನ್ನು ಬಲ ಪಡಿಸಲು ಸಹಾಯ ಮಾಡಬೇಕೆಂದು ಜಿಲ್ಲಾ ಪ್ರಧಾನ ಕಾರ್ಯದರ್ಶಿ  ಶಶಿಕಲಾ ಮೂರ್ತಿ ತಿಳಿಸಿದರು

ಇಂದು ನಡೆದ ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಪಕ್ಷದ ಕಚೇರಿಯಲ್ಲಿ ನಡೆದ ಶಕ್ತಿ ನೋಂದಣಿ ಸಭೆಯಲ್ಲಿ ಅವರು ಮಾತನಾಡಿದರು.  

 ಸ್ತ್ರೀ ಸ್ವಸಹಾಯ ಸಂಘಗಳಿಗೆ ಉತ್ತೇಜನ ನೀಡಿದ್ದು ಹಾಗೂ ಉಳುವವನೆ ಭೂಮಿಯ ಒಡೆಯ ನೀತಿಯನ್ನು ಜಾರಿಗೆ ತಂದಿದ್ದು ನಮ್ಮ ಪಕ್ಷದ ಹೆಮ್ಮೆ ಈ ವಿಷಯವನ್ನು ತಳಮಟ್ಟದಲ್ಲಿ ಜನರಿಗೆ ತಿಳಿಸುವ ಕಾರ್ಯವನ್ನು ಬೂತ್ ಮಟ್ಟದ ಕಾರ್ಯಕರ್ತರು ಸಮರ್ಥವಾಗಿ ನಿಭಾಹಿಸಬೇಕೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಹೆಚ್.ಬಿ.ಮಂಜಪ್ಪ ವಹಿಸಿದ್ದರು. ಎಲ್ಲ ತಾಲ್ಲೂಕಿನ ಬ್ಲಾಕ್ ಅಧ್ಯಕ್ಷರುಗಳು ಹಾಗೂ ಮುಖಂಡರ ಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿದ್ದರು.

Leave a Reply

Your email address will not be published.