SC/ST ಮುಂಬಡ್ತಿ ಮಸೂದೆ ಜಾರಿಗೆ ಒತ್ತಾಯಿಸಿ ಶಾಸಕರ ಭವನ ಮುಂದೆ ಧರಣಿ


ಚಳ್ಳಕೆರೆ: ಇಲ್ಲಿನ ಶಾಸಕರ ಭವನ ಮುಂದೆ ಎಸ್ ಸಿ/ಎಸ್ ಟಿ ಮುಂಬಡ್ತಿ ಮಸೂದೆ ಜಾರಿಗೆ ಒತ್ತಾಯಿಸಿ ಶನಿವಾರ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಯಿತು. 

3500 ಕ್ಕೂ ಹೆಚ್ಚು ಎಸ್ ಸಿ ಎಸ್ ಟಿ ವರ್ಗಗಳ ಅಧಿಕಾರಿ /ನೌಕರರನ್ನು ರಾಜ್ಯ ಸರ್ಕಾರ ಹಿಂಬಡ್ತಿಗೆ ತಌದೆ. ಮುಂಬಡ್ತಿ ಮಸೂದೆಯನ್ನು ಶಿಘ್ರ ಜಾರಿಗೊಳಿಸಿ ಸರ್ಕಾರ ಸಾಮಾಜಿಕ ನ್ಯಾಯದ ಪರ ಇದೆ ಎಂದು ತೋರಿಸಿಕೊಳ್ಳಬೇಕು ಎಂದು ಒಕ್ಕೂಟ ಒತ್ತಾಯಿಸಿದೆ. 

ಎಸ್.ಸಿ.ಎಸ್.ಟಿ. 2017 ರ ಮುಂಬಡ್ತಿ ಮೀಸಲಾತಿ ಮಸೂದೆಯನ್ನು ಕಾಯ್ದೆ ಶೀಘ್ರವೇ ಜಾರಿಗೊಳಿಸಬೇಕು. ಈ ಮಸೂದೆಯನ್ನು  ಹಿಂದುಳಿದ ವರ್ಗ ಮತ್ತು ಅಲ್ಪಸಂಖ್ಯಾತರಿಗೂ ವಿಸ್ತರಿಸಬೇಕು. ಎನ್. ಪಿ.ಎಸ್. ರದ್ದುಪಡಿಸಿ ಒಪಿಎಸ್ ಜಾರಿ ಮತ್ತು ಬ್ಯಾಕ್ ಲಾಗ್ ಹುದ್ದೆಗಳನ್ನು ಭರ್ತಿಗೊಳಿಸಬೇಕೆಂದು ಒಕ್ಕೂಟ ಆಗ್ರಹಿಸಿದೆ. 

ಕರ್ನಾಟಕ ರಾಜ್ಯ್ ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ನೌಕರರ ಒಕ್ಕೂಟದಿಂದ ರಾಜ್ಯಾದ್ಯಂತ ಶಾಸಕರುಗಳ ಮತ್ತು ಸಚಿವರ ನಿವಾಸಗಳ ಮುಂದೆ ಮುಂಬಡ್ತಿ ಮಸೂದೆ ಜಾರಿಗೆ ಒತ್ತಾಯಿಸಿ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತಿದೆ. 

ಇಂದಿನ ಧರಣಿಯಲ್ಲಿ ನೌಕರರ ಸಂಘದ ಅಧ್ಯಕ್ಷ ಸೂರನಾಯಕ, ಸರ್ಕಾರಿ ನೌಕರರ ಸಂಘದ ರಾಜ್ಯ ಪರಿಷತ್ ಸದಸ್ಯ ಸಿ.ಟಿ. ವಿರೇಶ,  ಜಿ.ಟಿ. ವೀರಭದ್ರಸ್ವಾಮಿ, ಶ್ರೀನಿವಾಸ ಮುಂತಾದವರು ಇದ್ದರು. 

Leave a Reply

Your email address will not be published.