ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಸಂದೇಶ: ಕಾಂಗ್ರೆಸ್ ಮುಖಂಡ ಬಾಬಾಖಾನ್ ಬಂಧನ


ಕಲಬುರಗಿ: ಸಾಮಾಜಿಕ ಜಾಲತಾಣದಲ್ಲಿ ವಿವಾದಿತ ಹೇಳಿಕೆಯನ್ನು ಹರಿಬಿಟ್ಟ ಆರೋಪದ ಮೇಲೆ ಕಾಂಗ್ರೆಸ್ ಪಕ್ಷದ ಮುಖಂಡ ಬಾಬಾಖಾನ್ ಅವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಾಬಾಖಾನ್ ಅವರ ವಿವಾದಿತ ಸಂದೇಶವನ್ನು ವಿರೋಧಿಸಿ ಮುಸ್ಲಿಂ ಸಮುದಾಯದವರು ಮುಸ್ಲಿಂ ಚೌಕ್‍ನಲ್ಲಿ ಪ್ರತಿಭಟಿಸಿ ಬಾಬಾಖಾನ್ ಅವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿದ್ದರು. ದೂರನ್ನು ಗಂಭೀರವಾಗಿ ಪರಿಗಣಿಸಿದ ಪೋಲಿಸರು ಬಾಬಾಖಾನ್ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡರು.

ದರ್ಗಾ ಮತ್ತು ಮಸ್ಜೀದಗಳ ವಿರುದ್ಧ ವಿವಾದಿತ ಹೇಳಿಕೆಯನ್ನು ಬಾಬಾಖಾನ್ ಅವರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ನೀಡಿದ್ದು ಮುಸ್ಲಿಂ ಸಮುದಾಯದವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು.

ಎ ಉಪ ವಿಭಾಗದ ಎಎಸ್‍ಪಿ ಲೋಕೇಶ್ ಮತ್ತು ಸಿಬ್ಬಂದಿಗಳ ವಶದಲ್ಲಿರುವ ಬಾಬಾಖಾನ್ ಅವರನ್ನು ಪೋಲಿಸರು ವಿಚಾರಣೆಗೆ ಒಳಪಡಿಸಿದ್ದಾರೆ.

Leave a Reply

Your email address will not be published.