ಮಾಜಿ ಶಾಸಕ ಬಾಬುರೆಡ್ಡಿ ತುಂಗಳ ಇನ್ನಿಲ್ಲ


ಜಮಖಂಡಿ: ಮಾಜಿ ಶಾಸಕ ಬಾಬುರೆಡ್ಡಿ ತುಂಗಳ (84) ವಿಧಿವಶರಾಗಿದ್ದಾರೆ.

ಜಮಖಂಡಿಯ ಖಾಸಗಿ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು. 1985 ರಲ್ಲಿ ಅವರು ಬೀಳಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದರು.

ಮಾರ್ಚ್ 13, 1933 ರಲ್ಲಿ ಜನಿಸಿದ್ದ ಅವರು, ಪತ್ರಿಕೋದ್ಯಮದ ಮೂಲಕವೂ ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು. ಕುರುಕ್ಷೇತ್ರ, ದಡಲ್ ಬಾಜಿ ಅವರ ಸಂಪಾದಕತ್ವದ ಪತ್ರಿಕೆಗಳಾಗಿದ್ದವು.

Leave a Reply

Your email address will not be published.