ವಾಲ್ಮೀಕಿ ಜನಾಂಗಕ್ಕೆ ಅವಹೇಳನ: ಆರೋಪಿಯ ಬಂಧನಕ್ಕೆ ಬೈಲಹೊಂಗಲ ಯುವವೇದಿಕೆ ಒತ್ತಾಯ


ಬೈಲಹೊಂಗಲ: ವಾಲ್ಮೀಕಿ ಜನಾಂಗದ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ವ್ಯಕ್ತಿಯನ್ನು ತಕ್ಷಣ ಬಂಧಿಸಬೇಕು ಎಂದು ಕರ್ನಾಟಕ ವಾಲ್ಮೀಕಿ ಯುವ ವೇದಿಕೆ ಒತ್ತಾಯಿಸಿದೆ.

ಈ ಸಂಬಂಧ ಬೆಳಗಾವಿ ಎಸ್ ಪಿ ಅವರಿಗೆ  ಬೈಲಹೊಂಗಲ ಪಿಎಸ್ ಐ ಮುಖಾಂತರ ಲಿಖಿತ ದೂರು ನೀಡಿರುವ ವೇದಿಕೆಯ ಬೈಲಹೊಂಗಲ ತಾಲೂಕಾ ಅಧ್ಯಕ್ಷ ಸಂಜು ಪದ್ಮನ್ನವರ್,  ವ್ಯಕ್ತಿಯು ಜಾತಿ ನಿಂದನೆ ಮಾಡುವುದಲ್ಲದೇ ತೀರಾ ಕೀಳು ಭಾಷೆಯಲ್ಲಿ ಅವಹೇಳನಕಾರಿಯಾಗಿ ಮಾತನಾಡಿರುವ ವಿಡಿಯೋ ವೈರಲ್ ಆಗಿದೆ. ಹೀಗೆ ಜಾತಿ ವಿಷಬೀಜ ಬಿತ್ತಿ ಸಮಾಜದಲ್ಲಿ ಬೆಂಕಿಗೆ ಕಾರಣವಾಗುವ ಇಂಥವರ ವಿರುದ್ದ ಕ್ರಮ ಕೈಗೊಳ್ಳಬೇಕು. ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟೆಚ್ಚರ ವಹಿಸಬೇಕೆಂದು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮುಂದಿನ ಮೂರು ದಿನಗಳಲ್ಲಿ ಆರೋಪಿಯ ಬಂಧನವಾಗದಿದ್ದರೇ ತಾಲೂಕಾ ಮಟ್ಟದಲ್ಲಿ ಉಗ್ರ ಹೋರಾಟ ಮಾಡಲಾಗುವುದು ಎಂದು ವೇದಿಕೆ ಪದಾಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. 

 ವೇದಿಕೆ ತಾಲೂಕಾ ಪಧಾಧಿಕಾರಿಗಳಾದ ಮಲ್ಲಿಕಾರ್ಜುನ ಕಿತ್ತುರ, ಹಣಮಂತ ದಡ್ಡಣ್ಣವರ್,  ದ್ಯಾಮನ್ನಾ ಇದ್ದರು. 

Leave a Reply

Your email address will not be published.