ಮರಾಠಿ ಕಿಡಿಗೇಡಿಗಳ ಕರಾಳ ದಿನ: ಬಸವೇಶ್ವರ ವೃತ್ತಕ್ಕೆ ತೆರಳಲು ಯತ್ನಿಸಿದ ಯುವಕರನ್ನು ತಡೆದ ಪೊಲೀಸರು


ಬೆಳಗಾವಿ: ಇಲ್ಲಿನ ಬಸವೇಶ್ವರ ವೃತ್ತದಲ್ಲಿ  ಮರಾಠಿಗರು ಆಚರಿಸುತ್ತಿದ್ದ ಕರಾಳ ದಿನಾಚರಣೆ ವೇಳೆ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ತೇಲಾಡುತ್ತಿರುವ  ಯುವಕರ ದಂಡನ್ನು  ವೃತ್ತಕ್ಕೆ ತೆರಳಲು ಪೊಲೀಸರು ತಡೆದ ಘಟನೆ ನಡೆದಿದೆ. 

ಇಡೀ ನಗರ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ತೇಲಾಡಿತು. ದೊಡ್ಡ ದೊಡ್ಡ ಕನ್ನಡ ಬಾವುಟಗಳನ್ನು ಹಿಡಿದು ಬೈಕ್ ಮೆರವಣಿಗೆಯಲ್ಲಿ ತೆರಳುವ ಮೂಲಕ ಕೆಚ್ಚೆದೆಯ ಕನ್ನಡ ಯುವಕರ ಉತ್ಸಾಹ ಮೆರೆಯುತ್ತಿದ್ದಾರೆ. 

ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬಸವೇಶ್ವರ ವೃತ್ತದಲ್ಲಿಯೂ ಕನ್ನಡ ಧ್ವಜ ಹಾರಾಡಿದವು. ಇನ್ನೊಂದೆಡೆ ಬಸವೇಶ್ವರ ವೃತ್ತದಲ್ಲಿ ಕೆಲವು ಮರಾಠಿ ಕಿಡಿಗೇಡಿಗಳು ಕರಾಳ ದಿನ ಆಚರಿಸಲು ವಿಫಲ ಯತ್ನ ನಡೆಸಿ ಮುಖ ಭಂಗಕ್ಕೆ ಒಳಗಾದರು.

Leave a Reply

Your email address will not be published.