ಬೆಳಗಾವಿಯಲ್ಲಿ ಮೊಳಗಿದ ಕನ್ನಡ ಘೋಷಣೆ, ಎಲ್ಲೆಲ್ಲೂ ಸಂಭ್ರಮ ,ಮರಾಠಿಗರಿಗೆ ಮತ್ತೆ ಮುಖಭಂಗ !


ಬೆಳಗಾವಿ: ಗಡಿ ನಗರ ಬೆಳಗಾವಿಯಲ್ಲಿ ಗುರುವಾರ ಸಂಭ್ರಮವೋ ಸಂಭ್ರಮ. ಕನ್ನಡ ಭಾಷಿಕರ ಕಿವಿಗಡಚಿಕ್ಕುವ ಘೋಷಣೆಗಳು ಮುಗಿಲುಮುಟ್ಟಿದ್ದವು.

ಇಡೀ ನಗರ ಕನ್ನಡ ರಾಜ್ಯೋತ್ಸವದ ಸಂಭ್ರಮದಲ್ಲಿ ತೇಲಾಡಿತು. ದೊಡ್ಡ ದೊಡ್ಡ ಕನ್ನಡ ಬಾವುಗಳನ್ನು ಹಿಡಿದು ಬೈಕ್ ಮೆರವಣಿಗೆಯಲ್ಲಿ ತೆರಳುವ ಮೂಲಕ ಕೆಚ್ಚೆದೆಯ ಕನ್ನಡ ಯುವಕರ ಉತ್ಸಾಹ ಮೆರೆದರು.

ನಗರದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಬಸವೇಶ್ವರ ವೃತ್ತದಲ್ಲಿಯೂ ಕನ್ನಡ ಧ್ವಜ ಹಾರಾಡಿದವು. ಇನ್ನೊಂದೆಡೆ ಬಸವೇಶ್ವರ ವೃತ್ತದಲ್ಲಿ ಕೆಲವು ಮರಾಠಿ ಕಿಡಿಗೇಡಿಗಳು ಕರಾಳ ದಿನ ಆಚರಿಸಲು ವಿಫಲ ಯತ್ನ ನಡೆಸಿ ಮುಖ ಭಂಗಕ್ಕೆ ಒಳಗಾದರು.

ರಾಜ್ಯೋತ್ಸವದಂದು ಅಂಗಡಿ -ಮುಂಗಟ್ಟುಗಳನ್ನು ಮುಚ್ಚಿ ಕರಾಳ ದಿನ ಆಚರಣೆಗೆ ಮುಂದಾದ ಪುಂಡ ಮರಾಠಿಗರಿಗೆ ಈ ಬಾರಿಯಂತೂ ತೀರಾ ನಿರಾಸೆಯಾಯಿತು.

 

Leave a Reply

Your email address will not be published.