ಡಿ.6 ರಂದು ಪರಿವರ್ತನಾ ದಿನ: ಬಾಗಲಕೋಟೆಯಿಂದ ಅಪಾರ ಜನಸ್ತೋಮ ಭಾಗಿಯಾಗಲು ಕರೆ


ಬಾಗಲಕೋಟೆ:  ಡಾ. ಬಾಬಾ ಸಾಹೇಬ್ ಅಂಬೇಡ್ಕರ್  ಪರಿನಿರ್ವಾಣ ದಿನವಾದ ಡಿ.6 ರಂದು ಮಾನವ ಬಂಧುತ್ವ ವೇದಿಕೆಯಿಂದ ಬೆಳಗಾವಿ ಸದಾಶಿವ ನಗರ ಬುದ್ದ ಬಸವ ಅಂಬೇಡ್ಕರ್ ಶಾಂತಿಧಾಮದಲ್ಲಿ  ಮೌಢ್ಯ ವಿರೋಧಿ(ಪರಿವರ್ತನಾ) ದಿನಾಚರಣೆ ಆಚರಿಸಲಾಗುತ್ತಿದ್ದು, ಬಾಗಲಕೋಟೆ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸಬೇಕು ಎಂದು   ವೇದಿಕೆ ಕಾರ್ಯಕರ್ತರು ಮನವಿ ಮಾಡಿದರು.

ಜಿಲ್ಲೆಯ ಕಟಕೋಳ, ಸೇರಿದಂತೆ ವಿವಿಧ ಗ್ರಾಮಗಳಿಗೆ ತೆರಳಿ ಕಾರ್ಯಕರ್ತರು ಜನರಿಗೆ ಜಾಗೃತಿ ಮೂಡಿಸಿದರು. ಗ್ರಾಮದ ತುಂಬ ಮೌಢ್ಯ ವಿರೋಧಿ ದಿನಾಚರಣೆಯ ಜಾಹೀರಾತು ಅಂಟಿಸಿ ಜನರ ಗಮನ ಸೆಳೆದರು.

ಕಳೆದ ನಾಲ್ಕು ವರ್ಷದಲ್ಲಿ ಮಾನವ ಬಂಧುತ್ವ ವೇದಿಕೆ ಸಂಘಟನೆ ವತಿಯಿಂದ ಸದಾಶಿವ ನಗರದ ಶಾಂತಿಧಾಮದಲ್ಲಿ ಮೌಢ್ಯ ದಿನಾಚರಣೆ ಆಚರಿಸಲಾಗುತ್ತಿದೆ.  ಕಳೆದ ವರ್ಷ 50 ಸಾವಿರ ಜನ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಿದ್ದರು. ಈ ಭಾರಿ 60 ಸಾವಿರ ಜನ ಭಾಗಿಯಾಗುವ ನಿರೀಕ್ಷೆಯಿದೆ. ಬಾಗಲಕೋಟೆ ಜಿಲ್ಲೆಯಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಎಂದು ವೇದಿಕೆ ಕಾರ್ಯಕರ್ತರು ಗ್ರಾಮಸ್ಥರಿಗೆ ಮನವಿ ಮಾಡಿದರು.

Leave a Reply

Your email address will not be published.