ಭಜನೆ ಗಾಯಕ ವಿನೋದ ಅಗರವಾಲ್ ಇನ್ನಿಲ್ಲ


ಹೊಸದಿಲ್ಲಿ: ಕೆಲವು ದಿನಗಳಿಂದ ಅಸ್ವಸ್ಥರಾಗಿದ್ದ ಭಜನೆ ಗಾಯಕ ವಿನೋದ ಅಗರವಾಲ್ ಮಂಗಳವಾರ ದೆಹಲಿಯಲ್ಲಿ ವಿಧಿವಶರಾಗಿದ್ದಾರೆ.

ಕೆಲವು ದಿನಗಳ ಹಿಂದೆ ಬಹುಅಂಗಾಂಗ ವೈಫಲ್ಯದಿಂದ ಮಥುರಾ ರಸ್ತೆಯ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದ 63 ವಯಸ್ಸಿನ ಅಗರವಾಲ್ ಇಂದು ಬೆಳಗಿನ ಜಾವ ಕೊನೆಯುಸಿರೆಳೆದರು.

1955 ರಲ್ಲಿ ಜನಿಸಿದ್ದ ಅಗರವಾಲ್ ಭಕ್ತಿ ಗೀತೆಗಳನ್ನು ಹಾಡುವುದರಲ್ಲಿ ನಿಸ್ಸೀಮರಾಗಿದ್ದರು. ನಂತರ ಅವರು ಕೃಷ್ಣನ ಮೇಲಿನ ತಮ್ಮ ಭಕ್ತಿಯ ಕಾರಣಕ್ಕಾಗಿ ವೃಂದಾವನದಲ್ಲಿ ನೆಲೆಸಿದ್ದರು.

Leave a Reply

Your email address will not be published.