ಮದುವೆಗೆ ಒಪ್ಪದ ವಿದ್ಯಾರ್ಥಿನಿ ಕತ್ತಿಗೆ ಬ್ಲೇಡ್ ಹಾಕಿದನಾ ಕಿರಾತಕ ಶಿಕ್ಷಕ ?


ಕರ್ನೂಲ (ಆಂಧ್ರಪ್ರದೇಶ): ಮದುವೆಗೆ ಒಪ್ಪದ ವಿದ್ಯಾರ್ಥಿನಿಯ ಕತ್ತಿಗೆ ಶಿಕ್ಷಕನೊಬ್ಬ ಬ್ಲೇಡಿನಿಂದ ಇರಿದು ಗಾಯಗೊಳಿಸಿರುವ ಭೀಬತ್ಸ ಘಟನೆ ಕರ್ನೂಲ್ ಜಿಲ್ಲೆಯಲ್ಲಿ ಶನಿವಾರ ಸಂಭವಿಸಿದೆ.

ರಾಕ್ ವೆಲ್ ಪ್ರೌಢಶಾಲೆಯಲ್ಲಿ 9 ನೇ ತರಗತಿಯಲ್ಲಿ ಓದುತ್ತಿರುವ ವಿದ್ಯಾರ್ಥಿನಿಯ ಮನೆಗೆ ನುಗ್ಗಿದ ಹಿಂದಿ ಶಿಕ್ಷಕ ಶಂಕರ್ ಎಂಬಾತ ಆಕೆಗೆ ಮದುವೆಯಾಗುವಂತೆ ಪೀಡಿಸಿದ. ಆಕೆ ಒಲ್ಲೆ ಎಂದಾಗ ಬ್ಲೇಡಿನಿಂದ ಕುತ್ತಿಗೆಗೆ ಇರಿದ. ಬಾಲಕಿ ಕೂಗಾಡತೊಡಗಿದಾಗ ಓಡಿ ಬಂದ ಅಕ್ಕಪಕ್ಕದವರು ಶಿಕ್ಷಕನನ್ನು ಹಿಗ್ಗಾ ಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಶಿಕ್ಷಕ-ವಿದ್ಯಾರ್ಥಿನಿ ಇಬ್ಬರೂ ಸದ್ಯ ಅಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಶಿಕ್ಷಕನ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published.