ಔರಂಗಾಬಾದ, ಉಸ್ಮಾನಾಬಾದ ಹೆಸರು ಬದಲಾಯಿಸಲು ಶಿವಸೇನೆ ಆಗ್ರಹ


ಮುಂಬೈ :ಔರಂಗಾಬಾದ್ ಗೆ ಸಂಭಾಜಿ ನಗರ ಹಾಗೂ ಉಸ್ಮಾನಾಬಾದ್ ಗೆ ಧಾರಾಶಿವ ಎಂದು ಮರುನಾಮಕರಣ ಮಾಡಬೇಕು ಎಂದು ಶಿವಸೇನೆ ಮತ್ತೊಮ್ಮೆ  ಒತ್ತಾಯಿಸಿದೆ.

ಎರಡೂ ಪಟ್ಟಣಗಳ ಮರುನಾಮಕರಣ ಮಾಡುವಂತೆ ಶಿವಸೇನೆ ಒತ್ತಾಯಿಸುತ್ತಿರುವುದು ಇದೇ ಮೊದಲೇನಲ್ಲ ಎಂದು ಶಿವಸೇನೆ ಮುಖಂಡೆ ಮನಿಷಾ ಕಾನಂದೆ ಹೇಳಿದರು.

ಹಾಗೆ ನೋಡಿದರೆ ಈ ಮರುನಾಮಕರಣ ಬೇಡಿಕೆಗೆ ದಶಕಗಳ  ಇತಿಹಾಸವೇ ಇದೆ. ಬಹಳಷ್ಟು ಬಾರಿ ಈ ಬಗ್ಗೆ ಒತ್ತಡ ಹೇರಲಾಗಿದ್ದರೂ ಮುಸ್ಲಿಂರನ್ನು ಓಲೈಸುವ ಸಲುವಾಗಿ ಕಾಂಗ್ರೆಸ್ ಮತ್ತು ಎನ್ ಸಿ ಪಿ ಗಳು ಅದನ್ನು ವಿರೋಧಿಸುತ್ತಲೇ ಬಂದಿವೆ ಎಂದೂ ಅವರು ದೂಷಿಸಿದರು.

Leave a Reply

Your email address will not be published.