ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಿ ರವೀಂದ್ರ ಕರಲಿಂಗನ್ನವರ ಅಧಿಕಾರ ಸ್ವೀಕಾರ

ರವೀಂದ್ರ ಕರಲಿಂಗನ್ನವರ ,ಉಪವಿಭಾಗಾಧಿಕಾರಿ,ಚಿಕ್ಕೋಡಿ

ಚಿಕ್ಕೋಡಿ : ಇಲ್ಲಿನ ಉಪವಿಭಾಗಾಧಿಕಾರಿಯಾಗಿ ರವೀಂದ್ರ ಕರಲಿಂಗನ್ನವರ ಸೋಮವಾರ ಅಧಿಕಾರ ವಹಿಸಿಕೊಂಡರು.

ಪ್ರಭಾರಿ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಪ್ರವೀಣ ಬಾಗೇವಾಡಿಯವರು ಸೋಮವಾರ ರವೀಂದ್ರ ಕರಲಿಂಗನ್ನವರ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಜಮಖಂಡಿ, ವಿಜಯಪುರ ಮತ್ತು ಹರಪನಳ್ಳಿ ವಿವಿಧೆ ಉಪವಿಭಾಗಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರವೀಂದ್ರ ಕರಲಿಂಗನ್ನವರ ಅವರು ಇದೀಗ ಚಿಕ್ಕೋಡಿ ಉಪವಿಭಾಗಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಅವರು, ಈ ಭಾಗದ ಸಾಮಾನ್ಯ ಜನರಿಗೆ ತೊಂದರೆಯಾಗದಂತೆ ಜಾಗೃತಿ ವಹಿಸಲಾಗುವುದು. ಉಪವಿಭಾಗಾಧಿಕಾರಿಗಳ ಕಾರ್ಯಾಲಯದಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ಹೇಳಿದರು.

Leave a Reply

Your email address will not be published.