ಪರಿಶುದ್ದ ಮತದಾರರ ಪಟ್ಟಿ ಸಿದ್ದಕ್ಕಾಗಿ ಶೀಘ್ರ ಬಿಎಲ್ ಓಗಳಿಗೆ ತರಬೇತಿಲ: ಆರ್ ಸಿ ಮೇಘನ್ನವರ


ಚಿಕ್ಕೋಡಿ : ಪರಿಶುದ್ದವಾದ ಮತದಾರರ ಪಟ್ಟಿ ಪ್ರಕಟಗೊಳ್ಳಬೇಕಾದರೇ ಬಿಎಲ್‍ಓಗಳು ಕಡ್ಡಾಯವಾಗಿ ತಮ್ಮ ಮತಗಟ್ಟೆ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಸರಿಯಾದ ಮಾಹಿತಿ ಸಂಗ್ರಹಿಸಬೇಕು ಎಂದು ಪ್ರಾದೇಶಿಕ ಆಯುಕ್ತರು ಮತ್ತು ಬೆಳಗಾವಿ ಜಿಲ್ಲಾ ಮತದಾರರ ಪಟ್ಟಿ ವೀಕ್ಷಣಾಧಿಕಾರಿ ಪಿ.ಎ.ಮೇಘನ್ನವರ ತಿಳಿಸಿದರು.

ಇಲ್ಲಿನ ಮಿನಿವಿಧಾನ ಸೌದದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಎಲ್‍ಓಗಳು ಮನೆ ಮನೆಗೆ ಹೋಗದಿರುವುದು ಕಂಡು ಬಂದಿದೆ. ಕೆಲವೆಡೆ ಬಿಎಲ್‍ಓಗಳು ಯಾರೂ ಎಂಬುದೇ ಗೊತ್ತಿಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ನಿರೀಕ್ಷಿತ ಮಟ್ಟದಲ್ಲಿ ಬಿಎಲ್‍ಓಗಳಿಂದ ಕೆಲಸವಾಗಿಲ್ಲ. ಆದ್ದರಿಂದ ಶೀಘ್ರ ಬಿಎಲ್‍ಓಗಳಿಗೆ ಒಂದು ತರಬೇತಿ ಏರ್ಪಡಿಸುವ ಮೂಲಕ ಈ ವ್ಯವಸ್ಥೆ ಸುಧಾರಣೆ ಮಾಡಲಾಗುವುದು ಎಂದು ಹೇಳಿದರು.

ಮತದಾರರ ನೊಂದಣಿ ಅಧಿಕಾರಿಯನ್ನಾಗಿ ಉಪವಿಭಾಧಿಕಾರಿಗಳನ್ನು ಮತ್ತು ಸಹಾಯಕ ಮತದಾರರ ನೋಂದಣಿ ಅಧಿಕಾರಿಯನ್ನಾಗಿ ತಹಸೀಲ್ದಾರರನ್ನು ನೇಮಕ ಮಾಡಲಾಗಿದೆ ಎಂದು ಹೇಳಿದರು. ಮತದಾರರ ಪಟ್ಟಿಯಲ್ಲಿ ಏನಾದರೂ ಆಕ್ಷೇಪಣೆ ಇದ್ದಲ್ಲಿ ಡಿ.20 ರೊಳಗೆ ಸಲ್ಲಿಸಬೇಕು. ಪರಿಶುದ್ದವಾದ ಅಂತಿಮ ಮತದಾರರ ಪಟ್ಟಿ ಜ. 4 ರಂದು ಪ್ರಕಟಗೊಳ್ಳಲಿದೆ ಎಂದು ಹೇಳಿದರು.

ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನ್ನವರ, ಪ್ರವೀಣ ಬಾಗೇವಾಡಿ, ಎ.ಎಸ್.ಪಾಟೀಲ, ಅರುಣ ಶ್ರೀಖಂಡೆ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published.