ಹಜರತ್ ಟಿಪ್ಪು ಸುಲ್ತಾನ ಜಯಂತಿ ನಿಮಿತ್ಯ ಬೆಳಗಾವಿಯಲ್ಲಿ ನಿಷೇಧಾಜ್ಞೆ


ಬೆಳಗಾವಿ: ಬೆಳಗಾವಿ ನಗರದಲ್ಲಿ ನವೆಂಬರ್ 10 ರಂದು ಹಜರತ್ ಟಿಪ್ಪು ಸುಲ್ತಾನ ಜಯಂತಿಯ ಅಂಗವಾಗಿ ಜಿಲ್ಲಾಡಳಿತ ವತಿಯಿಂದ ಆಚರಿಸಲಿದ್ದು, ಬೆಳಗಾವಿ ತಾಲೂಕು ಮತ್ತು ಬೆಳಗಾವಿ ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಪ್ರದೇಶಗಳಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಲು ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮುಂಜಾಗೃತಾ ಕ್ರಮವಾಗಿ ನವೆಂಬರ್ 9 ರಂದು ರಾತ್ರಿ 11.55 ಗಂಟೆಯಿಂದ ನವೆಂಬರ್ 11 ರಂದು ಬೆಳಿಗ್ಗೆ 6 ಗಂಟೆಯವರೆಗೆ ಜಾರಿಗೆ ಬರುವಂತೆ ಕರ್ನಾಟಕ ಪೊಲೀಸ್ ಕಾಯ್ದೆ ಕಲಂ.35 ರ ಮೇರೆಗೆ ಹೆಚ್ಚುವರಿ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಪೊಲೀಸ್ ಆಯುಕ್ತರು ಡಾ: ಡಿ.ಸಿ ರಾಜಪ್ಪ ಅವರು ಆದೇಶವನ್ನು ಹೊರಡಿಸಿದ್ದಾರೆ.

ಕಲಂ.35 ರ ಮೇರೆಗೆ ನಿರ್ಭಂದನೆಗಳು:
ಸಾರ್ವಜನಿಕ ಸ್ಥಳದಲ್ಲಿ ಬಹಿರಂಗವಾಗಿ ಘೋಷಣೆ ಕೂಗುವುದು, ಪದ ಹಾಡುವುದು, ವಾದ್ಯ ಬಾರಿಸುವುದು. ಸನ್ನೆ ಅಥವಾ ನಕಲಿ ಪ್ರದರ್ಶನವನ್ನು ಮತ್ತು ಸಾರ್ವಜನಿಕ ಸಭ್ಯತೆ ಅಥವಾ ನೀತಿಯನ್ನು ಅಕ್ರಮಿಸಬಹುದಾದ ಕೃತ್ಯಗಳ ಮಾಡುವುದನ್ನು ಹಾಗೂ ಸಾರ್ವಜನಿಕವಾಗಿ ಯಾವುದೇ ವ್ಯಕ್ತಿಯು ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡುಗಳು, ಭಾಷಣ, ಮತ್ತು ವ್ಯಕ್ತಿಗಳ ತೇಜೋವಧೆ ಮಾಡುವುದಾಗಲೀ, ಪ್ರತಿಕೃತಿಗಳನ್ನು ಪದರ್ಶಿಸುವುದಾಗಲೀ ಸಾರ್ವಜನಿಕರ ನೈತಿಕತೆಗೆ ಭಂಗತರುವಂತಹ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಜಿಲ್ಲಾಡಳಿತದಿಂದ ಆಚರಿಸುವ ಹಜರತ್ ಟಿಪ್ಪು ಜಯಂತಿ ಹಾಗೂ ಇನ್ನಿತರ ಅನುಮತಿಸಿದ ಕಾರ್ಯಕ್ರಮಗಳಿಗೆ ಈ ನಿಷೇಧಾಜ್ಞೆ ಅನ್ವಯಿಸುವುದಿಲ್ಲ.
ಈ ನಿಷೇಧಾಜ್ಞೆಯು ಮಾನವ ಶವದ ಅಂತ್ಯ ಕ್ರಿಯೆಯ ಮೆರವಣೆಗೆಗಳಿಗೆ ಹಾಗೂ ಅನುಮತಿ ಪಡೆದು ನಡೆಸುವ ಮೆರವಣೆಗೆಗಳಿಗೆ ಅನ್ವಯಿಸುವುದಿಲ್ಲ.

ಈ ಆಜ್ಞೆಯನ್ನು ಉಲ್ಲಂಘಿಸುವವರ ವಿರುದ್ಧ ಕಲಂ 188 ಭಾರತೀಯ ದಂಡ ಸಂಹಿತೆಯ ಪ್ರಕಾರ ಕ್ರಮವನ್ನು ಜರುಗಿಸಲು ಸಂಬಂಧಪಟ್ಟ ಪೊಲೀಸ್ ನಿರೀಕ್ಷಕರವರುಗಳಿಗೆ ಅನುಮತಿ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published.