ಕೇರಳ ಬಿಜೆಪಿ ಮುಖ್ಯಸ್ಥನಿಗೆ ಕೊಲೆ ಬೆದರಿಕೆ ಪತ್ರ !


ತ್ರಿವೆಂದ್ರಮ್ (ಕೇರಳ): ಭಾರತೀಯ ಜನತಾಪಕ್ಷ ಕೇರಳ ಘಟಕದ ಅಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೈ ಅವರಿಗೆ ಶನಿವಾರ ಮುಂಬೈನಿಂದ ಜೀವ ಬೆದರಿಕೆ ಪತ್ರ ಬಂದಿದೆ.

ನಾನು ಮುಂಬೈ ಮೂಲದ 66 ವರ್ಷದ ಮಲೆಯಾಳಿ. ನಾನು ಕೇರಳಕ್ಕೆ ಬಂದು ಭಾರತೀಯ ಜನತಾಪಕ್ಷದ ರಥಯಾತ್ರೆಯಲ್ಲಿ ಪಾಲ್ಗೊಂಡು ರಾಜೀವ ಗಾಂಧಿ ಹತ್ಯೆಯಂತಹ ಸುದ್ದಿ ಕೊಡತ್ತೇನೆ ಎಂದು ಪತ್ರದಲ್ಲಿ ಬರೆಯಲಾಗಿದೆ.

ಈ ಸಂಬಂಧ ಪಕ್ಷವು ಪೊಲೀಸರಿಗೆ ದೂರು ನೀಡಿದೆ.

ಪತ್ರವನ್ನು ಸ್ಪೀಡ್ ಪೋಸ್ಟ್ ಮೂಲಕ ಕಳಿಸಲಾಗಿದೆ. ಈ ಸಂಬಂಧ ಕೇರಳ ಡಿಜಿಪಿಗೆ ದೂರು ನೀಡಲಾಗಿದ್ದು,  ಈ ಬೆದರಿಕೆ ಹಿಂದಿರುವ ವ್ಯಕ್ತಿ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಕೋರಿದ್ದೇವೆ ಎಂದು ಬಿಜೆಪಿ ಪರ ನ್ಯಾಯವಾದಿ ಎಸ್ ಸುರೇಶ ತಿಳಿಸಿದ್ದಾರೆ.

 

Leave a Reply

Your email address will not be published.