ನೋಟು ನಿಷೇಧ ದುರದೃಷ್ಟಕರ ಕ್ರಮ ಎಂದ್ರು ಮನಮೋಹನಸಿಂಗ್ !


ಹೊಸದಿಲ್ಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರಕಾರವು 2016 ರಲ್ಲಿ ಮಾಡಿದ ನೋಟು ನಿಷೇಧ  ಪ್ರಕ್ರಿಯೆಯು ದುರುದೃಷ್ಟಕರವಾದದ್ದು ಮತ್ತು ವಿವೇಚನರಹಿತವಾದ ಕ್ರಮ ಎಂದು ಮಾಜಿ ಪ್ರಧಾನಿ ಮನಮೋಹನಸಿಂಗ್ ಟೀಕಿಸಿದ್ದಾರೆ.

ನೋಟು ನಿಷೇಧದಿಂದ ಭಾರತದ ಆರ್ಥಿಕ ವ್ಯವಸ್ಥೆ ಮತ್ತು ಸಾಮಾಜಿಕ ವ್ಯವಸ್ಥೆ ಮೇಲೆ ಕೆಟ್ಟ ಪರಿಣಾಮ ಬೀರಿತು ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ. ನೋಟು ನಿಷೇಧಕ್ಕೆ ಇಂದಿಗೆ ಎರಡು ವರ್ಷಗಳು. ವಿವೇಚನಾರಹಿತವಾಗಿ ಮಾಡಿದ ಈ ದುರದೃಷ್ಟಕರ ನಿರ್ಧಾರವು ವಯಸ್ಸು, ಲಿಂಗ, ಧರ್ಮ ಮತ್ತು ವೃತ್ತಿಭೇದವಿಲ್ಲದೇ ಪ್ರತಿಯೊಬ್ಬರ ಮೇಲೂ ಕೆಟ್ಟ ಪರಿಣಾಮ ಬೀರಿತು ಎಂದು ಅವರು ಹೇಳಿದ್ದಾರೆ.

ಸಮಯ ಎಲ್ಲವನ್ನೂ ಮರೆಸುತ್ತದೆ ಎಂದು ಹೇಳುತ್ತಾರೆ. ಆದರೆ, ನೋಟು ನಿಷೇಧದ ಗಾಯ ಮಾತ್ರ ಇದಕ್ಕೆ ಹೊರತಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ನೋಟು ನಿಷೇಧದಿಂದ ಆಗಿರುವ ಗಾಯ ಮಾಯುವ ಬದಲು ಇನ್ನಷ್ಟು ನಿಚ್ಚಳವಾಗಿ ಕಾಣುತ್ತಿದೆ. ಅದರ ದುಷ್ಪರಿಣಾಮಗಳು ನಿರಂತರವಾಗಿ ಮುಂದುವರಿದಿವೆ ಎಂದೂ ಅವರು ಹೇಳಿದ್ದಾರೆ.

 

Leave a Reply

Your email address will not be published.