ಕನ್ನಡ ಮಾತೆಗೆ ನಮಿಸಿ, ಕರಾಳ ದಿನಾಚರಣೆಯಲ್ಲಿ ಪಾಲ್ಗೊಂಡ ಉಪಮೇಯರ್ !


ಬೆಳಗಾವಿ: ಕಳೆದ ಕೆಲವು ವರ್ಷಗಳ ಅವಧಿಯಲ್ಲಿ ಎಂಇಎಸ್ ಬೆಳಗಾವಿಯಲ್ಲಿ ಹೇಳ ಹೆಸರಿಲ್ಲದಂತಾಗಿದ್ದರೂ ಕೆಲವು ಮರಾಠಿಗರ ಪುಂಡಾಟಿಕೆ ಮಾತ್ರ  ಇನ್ನೂ ನಿಂತಿಲ್ಲ ಎಂಬುದಕ್ಕೆ ಇಂದಿನ ರಾಜ್ಯೋತ್ಸವ ಕಾರ್ಯಕ್ರಮ ಸಾಕ್ಷಿಯಾಯಿತು.

ಬೆಳಗಾವಿ ಮಹಾನಗರಪಾಲಿಕೆಯ  ಇತಿಹಾಸದಲ್ಲಿ ಇದೇ ಮೊದಲ ಸಲ ಪಾಲಿಕೆ ಸಭಾಂಗಣದಲ್ಲಿ ಭುವನೇಶ್ವರಿ ಮಾತೆ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಕಾರ್ಯಕ್ರಮ ಮುಗಿದ ಮೇಲೆ ಉಪಮೇಯರ್ ಮಧುಶ್ರೀ ಪೂಜಾರಿ ಎಂಇಎಸ್ ಹಮ್ಮಿಕೊಂಡಿದ್ದ ಕರಾಳ ದಿನಾಚರಣೆಯಲ್ಲೂ ಪಾಲ್ಗೊಂಡು ಪುಂಡಾಟಿಕೆ ಮೆರೆದರು.

ಪಾಲಿಕೆ ಪರವಾಗಿ ಹಮ್ಮಿಕೊಳ್ಳಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮೇಯರ್ ಬಸವರಾಜ ಚಿಕ್ಕಲದಿನ್ನಿ , ಆಯುಕ್ತ ಶಶಿಧರ ಕುರೇರ ಅವರಲ್ಲದೇ ಕನ್ನಡ ಪರ ನಗರಸೇವಕರು ಪಾಲ್ಗೊಂಡಿದ್ದರು.

ರಾಜ್ಯೋತ್ಸವ ಆಚರಣೆ ಕಾಲಕ್ಕೆ  ಕನ್ನಡಿಗರ ಸಡಗರ ಸಂಭ್ರಮ ನೋಡಿ ಸಹಿಸಲಾಗದ ಎಂ ಇ ಎಸ್  ಕೆಲವು ಪುಂಡರು
ಕೊಂಡಸಕೊಪ್ಪ ಗ್ರಾಮದ ಕನ್ನಡ ಶಾಲೆಯಲ್ಲಿ  ಕಪ್ಪು ಬಾವುಟ ಹಾರಿಸಿದರು. ಹಿರೇಬಾಗೇವಾಡಿ ಪೊಲೀಸರು ಸ್ಥಳಕ್ಕೆ ಭೇಟಿ, ಪರಿಶೀಲನೆ ನಡೆಸಿದ್ದಾರೆ
ಕರಾಳ ದಿನ ಆಚರಣೆಯಲ್ಲಿ ಉಪಮೇಯರ್ ಮಧುಶ್ರೀ ಪೂಜಾರಿ ಭಾಗಿಯಾಗಿ ನಾಡವಿರೋಧಿ  ಎಂಬ ಟೀಕೆಗೆ ಒಳಗಾದರು.

ಉಪಮೇಯರ್ ಗೆ ಮಾಜಿ ಮೇಯರ್ ಸರೀತಾ ಪಾಟೀಲ, ವಿಕಾಸ ಕಲಘಟಗಿ ಮತ್ತು ಇತರರು ಸಾಥ್ ನೀಡಿದರು.

Leave a Reply

Your email address will not be published.