ಜನಾರ್ದನ ರೆಡ್ಡಿ ಬಿಜೆಪಿ ಮುಖಂಡ, ಕಾಂಗ್ರೆಸ್ಸಿಗೂ-ರೆಡ್ಡಿ ಡೀಲ್ ಆರೋಪಿಗಳಿಗೂ ಸಂಬಂಧವಿಲ್ಲ: ಸಚಿವ ಡಿಕೆಶಿ


ಬೆಂಗಳೂರು: ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಮುಖಂಡ, ಕಾಂಗ್ರೆಸ್ಸಿಗೂ ಮತ್ತು ರೆಡ್ಡಿ ಡೀಲ್ ಆರೋಪಿಗಳಿಗೂ ಯಾವುದೇ ಸಂಬಂಧವಿಲ್ಲ ಎಂದು ಡಿಕೆಶಿ ಸ್ಪಷ್ಟನೆ ನೀಡಿದ್ದಾರೆ. 

ರೆಡ್ದಿ ಡೀಲ್ ಪ್ರಕರಣ ದಲ್ಲಿ ಪ್ರಮುಖ ಆರೋಪಿಯಾಗಿರುವ ಫರೀದ್ ಜೊತೆ ಕಾಂಗ್ರೆಸ್ಸಿನ್ ಹಿರಿಯ ನಾಯಕ ಮತ್ತು ಶಾಸಕ ರಾಮಲಿಂಗಾ ರೆಡ್ಡಿ ಚಿತ್ರ ವೈರಲ್ ಆಗಿರುವ  ಕುರಿತು ಸ್ಪಷ್ಟನೆ ನೀಡಿದ ಡಿಕೆಶಿ ನಮ್ಮನ್ನು ಭೇಟಿಯಾಗಲು ಹಲವಾರು ಜನ ಪ್ರತಿನಿತ್ಯ ಬರುತ್ತಿದ್ದಾರೆ. ಅದರಲ್ಲಿ ಯಾರೂ ಅಪರಾಧ ಮಾಡಿರ್ತಾರೆಂದು ಹೇಗೆ ಗೊತ್ತಾಗುತ್ತದೆ. ಕಾಂಗ್ರೆಸ್ ಪಕ್ಷಕ್ಕೆ ಮತ್ತು ರೆಡ್ಡಿ ಡೀಲ್ ಆರೋಪಿಗಳಿಗೆ ಯಾವುದೇ ಸಂಬಂದವಿಲ್ಲ ಎಂದರು. 

ಕಳೆದ ಹಲವು ದಿನಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದು ಸರ್ಕಾರದಿಂದ ಯಾವುದೇ ಹಸ್ತಕ್ಷೇಪವಿಲ್ಲ.  ಗಾಲಿ ಜನಾರ್ದನ  ರೆಡ್ಡಿ  ಬಿಜೆಪಿ ಮುಖಂಡ ಆದ್ದರಿಂದ ಮಧ್ಯಪ್ರವೇಶಿಸಲು ಬಯಸುವುದಿಲ್ಲ. ಕಾನೂನು ಎಲ್ಲರಿಗೂ ಒಂದೇ,  ಕಾನೂನು ತನ್ನ ಕಾರ್ಯವನ್ನು ಮಾಡುತ್ತದೆ ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಇದರ ಬಗ್ಗೆ ಮಾತನಾಡುವುದಿಲ್ಲ  ಎಂದರು. 

Leave a Reply

Your email address will not be published.