ಪಟಾಕಿ ಸಿಡಿಸಲು ಹೋದ 16 ಮಂದಿಗೆ ಗಾಯ !


ಬೆಂಗಳೂರು: ಪಟಾಕಿ ಸಿಡಿಸುವ ಕುರಿತಂತೆ ಅದೆಷ್ಟೇ ಜಾಗೃತಿ ಮೂಡಿಸಿದ್ದರೂ ರಾಜಧಾನಿಯಲ್ಲಿ ಈ ಬಾರಿಯ ದೀಪಾವಳಿ ಕಾಲಕ್ಕೆ ಪಟಾಕಿ ಸಿಡಿಸಲು ಹೋಗಿ 16 ಮಂದಿ ಗಾಯಗೊಂಡಿದ್ದಾರೆ.

ನವೆಂಬರ್ 6 ರಂದು ಹತ್ತು ಮಂದಿ, ಮಾರನೇ ದಿನ 6 ಮಂದಿಗೆ ಗಾಯಗಳಾಗಿದ್ದು, ಈ ಪೈಕಿ ಇಬ್ಬರ ಕಣ್ಣುಗಳಿಗೆ ಗಂಭೀರ ಗಾಯಗಳಾಗಿವೆ.

ಗಾಯಾಳುಗಳಿಗೆ ಮಿಂಟೋ ಕಣ್ಣಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಪಟಾಕಿಗಳನ್ನು ಎಲ್ಲಿ , ಬೇಕಂದರೆ ಅಲ್ಲಿ, ಯಾವಾಗ ಬೇಕೋ ಆಗ ಸಿಡಿಸಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶ ಕಟ್ಟುನಿಟ್ಟಾಗಿ ಪಾಲನೆಯಾಗಿಲ್ಲದಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ.

Leave a Reply

Your email address will not be published.