ನೂರಾರು ರೈತರಿಂದ ಎಕ್ಸಿಸ್ ಬ್ಯಾಂಕ್ ಗೆ ಮುತ್ತಿಗೆ: ಕೇಸ್ ಹಿಂಪಡೆಯುವುದಾಗಿ ಮ್ಯಾನೇಜರ್ ಭರವಸೆ


ಬೈಲಹೊಂಗಲ: ಸಾಲ ಮರುಪಾವತಿ ಮಾಡಲಾಗದ ರೈತರ ಮೇಲೆ ಹಾಕಿರು  ಕೇಸ್ ಗಳನ್ನು ವಾಪಸ್ ಪಡೆದುಕೊಳ್ಳುವಂತೆ  ಹಸಿರು ಕ್ರಾಂತಿ, ಕರ್ನಾಟಕ ರೈತ ಸಂಘಟನೆ ನೇತೃತ್ವದಲ್ಲಿ  ರೈತರು ಸೋಮವಾರ ಎಕ್ಸಿಸ್ ಬ್ಯಾಂಕ್ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಎಕ್ಸಿಸ್ ಬ್ಯಾಂಕ್ ಗೆ ಮುತ್ತಿಗೆ ಹಾಕಿದ ರೈತರು ಬ್ಯಾಂಕ್ ಸಿಬ್ಬಂದಿಯನ್ನು ಹೊರಕಳಿಸಿ ಬ್ಯಾಂಕ್ ಗೆ ಬೀಗ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಸತತ ಬರಗಾಲ ಹಾಗೂ ನಾನಾ ಕಾರಣಗಳಿಂದ ಬೆಳೆ ಕೈಕೊಟ್ಟಿದ್ದು, ಸಾಲ ಮರು ಪಾವತಿ ಮಾಡಲಾಗಿಲ್ಲ. ರಾಜ್ಯ ಸರಕಾರ ರೈತರಿಗೆ ಕಿರಿಕಿರಿ ಮಾಡದಂತೆ ನಿರ್ದೇಶನ ನೀಡಿದರು ಸಹ ಎಕ್ಸಿಸ್ ಬ್ಯಾಂಕ್ ಅಧಿಕಾರಿಗಳು ಸರಕಾರದ ನಿರ್ದೇಶನ ಗಾಳಿಗೆ ತೂರಿ ರೈತಿಗೆ ನೋಟಿಸ್ ನೀಡಲಾಗಿದೆ. ರೈತ ಶಿವಾನಂದ ಸಿದ್ದಪ್ಪ ಕಂಠಿ ಸಾಮಾನ್ಯ ರೈತ.  ಟ್ರ್ಯಾಕ್ಟರ್ ಸಾಲ ನೀಡಲಾಗಿದೆ. ಆತ ಟ್ರ್ಯಾಕ್ಟರ್ ಊರಿಗೆ ತಂದ ಮೇಲೆ ಕೃಷಿ ಚಟುವಟಿಕೆಯಲ್ಲಿ ತೊಡಗಿದ್ದಾಗ ಟ್ರ್ಯಾಕ್ಟರ್ ಇಂಜಿನ್ ಸಮಸ್ಯೆ ಇದ್ದ ಕಾರಣ ಬ್ಯಾಂಕಿಗೆ ವಿಷಯ ತಿಳಿಸಿದ. ಬ್ಯಾಂಕಿನವರು ಟ್ರ್ಯಾಕ್ಟರ್ ಕಂಪನಿಯರಿಗೆ ವಿಷಯ ತಿಳಿಸಿದರೂ. ಆಗ ಬಂದು ಟ್ರ್ಯಾಕ್ಟರ್ ತೆಗೆದುಕೊಂಡು ಹೋಗಿದ್ದಾರೆ. ಮತ್ತೆ ಟ್ರ್ಯಾಕ್ಟರ್ ಮರಳಿ ನೀಡಿಲ್ಲ. ರೈತ ಸಾಲ ಹೇಗೆ ತುಂಬಬೇಕು ಎಂದು ಪ್ರಶ್ನಿಸಿದರು. ಸರ್ಕಾರ, ಬ್ಯಾಂಕು ರೈತರ ನೆರವಿಗೆ ಬರಬೇಕು. ಸಾಯುವ ರೈತರನ್ನು ರಕ್ಷಿಸಬೇಕು. ಈ ದಿಶೆಯಲ್ಲಿ ಕೆಲಸ ಮಾಡಬೇಕು. ಇಲ್ಲದಿದ್ದರೆ ಬ್ಯಾಂಕು ಕರ್ನಾಟಕದಿಂದ ಗಂಟುಮುಟೇ ಕಟ್ಟಿಕೊಂಡು ಹೋಗಬೇಕು. ರೈತರು ಮಾಡುವ ಚಳುವಳಿಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ಬ್ಯಾಂಕ್ ಮ್ಯಾನೇಜರ್ ರಾಜಕುಮಾರ್ ಮಾತನಾಡಿ,  ದಸರಾ ಹಬ್ಬದ ಅಂಗವಾಗಿ ಕೋಲ್ಕತ್ತಾ ನ್ಯಾಯಾಲಯಕ್ಕೆ ರಜೆ ಇದೆ. ಈಗಾಗಲೇ ಎಕ್ಸಿಸ್ ಬ್ಯಾಂಕ್ ಮುಖ್ಯ ಕಚೇರಿಯಿಂದ ರೈತರಿಗೆ ನೀಡಿರುವ ನೋಟಿಸ್, ಅರೆಸ್ಟ್ ವಾರೆಂಟ್ ಹಿಂದೆ ಪಡೆಯುವಂತೆ ನಿರ್ದೇಶನ ಬಂದಿದೆ. 140 ಕ್ಕೂ ಹೆಚ್ಚು ರೈತರ ಮೇಲಿರುವ ಕೇಸ್ ಹಿಂಪಡೆಯಲಾಗುವುದು. ಯಾರು ಆತಂಕಕ್ಕೆ ಒಳಗಾಬಾರದು ಎಂದು ಭರವಸೆ ನೀಡಿದರು.

ಬ್ಯಾಂಕ್ ವ್ಯವಸ್ಥಾಪ ಭರವಸೆ ನೀಡಿದ ಹಿನ್ನಲೆ  ರೈತರು ಪ್ರತಿಭಟನೆ ಕೈ ಬಿಟ್ಟರು. ಇನ್ನೂಳಿದ ಸಣ್ಣಪುಟ್ಟ ಸಮಸ್ಯೆ ಇವೆ. ಈ ಕುರಿಚು ಚರ್ಚಿಸಲು ಪಟ್ಟು ಹಿಡಿದಾಗ ಮದ್ಯ ಪ್ರವೇಶಿಸಿದ ಕೋಡಿಹಳ್ಳಿ ದಿನಾಂಕ ನಿಗದಿ ಮಾಡಿ ಸಮಸ್ಯೆ ಇತ್ಯರ್ಥ ಪಡಿಸಲು ತಿಳಿಸಿದರು. ನ.13ರಂದು ತಹಶೀಲ್ದಾರ ಅಧ್ಯಕ್ಷತೆಯಲ್ಲಿ ಸಭೆ ಕರೆಯುವ ತಿರ್ಮಾಣ ಕೈಕೊಂಡರು.

ಡಿವೈಎಸ್ಪಿ ಜೆ.ಎಂ.ಕರುಣಾಕರಶೆಟ್ಟಿ ನೇತೃತ್ವದಲ್ಲಿ ಬ್ಯಾಂಕಿಗೆ ಬಿಗಿ ಪೊಲೀಸ್ ಬಂದುಬಸ್ತ್ ಕೈಕೊಳ್ಳಲಾಗಿತ್ತು. ಮಹಾಂತೇಶ ಹಿರೇಮಠ, ರವಿ ಸಿದ್ದಮ್ಮನವರ, ಮಹಾಂತೇಶ ಕಮತ, ರಾಘವೇಂದ್ರ ನಾಯ್ಕ, ಮಲ್ಲಿಕಾರ್ಜುನ ರಾಮದುರ್ಗ, ಮಾಯಪ್ಪ ಹೆಗಡೆ, ಖಾನಗೌಡ ಪಾಟೀಲ, ವಿರೇಶ ಮಡ್ಡೆದ, ಫಕ್ಕೀರಪ್ಪ ಮುರಾರಿ, ರಾಯಪ್ಪ ಪೂಜೇರಿ, ಹನುಮಂತ ಹಂಜಿ, ಈಶ್ವರ ಶಿಲ್ಲೇದಾರ ಇದ್ದರು.

Leave a Reply

Your email address will not be published.