ಉಪಚುನಾವಣೆಯಲ್ಲಿ’ಕೈ’ ಗೆಲುವು: ಕಾರ್ಯಕರ್ತರ ಸಂಭ್ರಮಾಚರಣೆ


ಗಜೇಂದ್ರಗಡ: ಲೋಕಸಭೆ ಮತ್ತು ವಿಧಾನಸಭೆಯ ಉಪ ಸಮರದಲ್ಲಿ ಮೈತ್ರಿ ಸರಕಾರದ ಅಭ್ಯರ್ಥಿಗಳು ನಾಲ್ಕು ಕ್ಷೇತ್ರಗಳಲ್ಲಿ ಜಯಗಳಿಸಿದ ಹಿನ್ನಲೆಯಲ್ಲಿ ಪಟ್ಟಣದ ಕಾಲಕಾಲೇಶ್ವರ ವೃತ್ತದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.

ಈ ವೇಳೆ ಕೋಮುವಾದಿ ಪಕ್ಷವನ್ನು ಮತದಾರರು ದಿಕ್ಕರಿಸಿ ದೋಸ್ತಿ ಸರಕಾರಕ್ಕೆ ಬೆಂಬಲ ನೀಡಿದ್ದಾರೆ ಎಂದು ಘೋಷಣೆ ಕೂಗಿ ಸಂಭ್ರಮಿಸಿದರು.

ಅಶೋಕ ಬಾಗಮಾರ, ವೀರಣ್ಣ ಸೊನ್ನದ, ಮುರ್ತುಜಾ ಡಾಲಾಯತ್, ರಾಜು ಸಾಂಗ್ಲಿಕಾರ, ಮುತ್ತಣ್ಣ ಮ್ಯಾಗೇರಿ, ಎಚ್.ಎಸ್ ಸೋಂಪೂರ, ಬಿ.ಎಸ್ ಶೀಲವಂತರ ವೆಂಕಟೇಶ್ವರ ಮುದಗಲ್ಲ, ಇಮಾಮಸಾಬ ಬಾಗವಾನ, ಶರಣಪ್ಪ ಪೂಜಾರ ಸೇರಿದಂತೆ ಇತರರು ಪಾಲ್ಗೊಂಡಿದ್ದರು.

Leave a Reply

Your email address will not be published.