ಅರಭಾವಿ ನಾಡಕಚೇರಿಯಲ್ಲಿ ಶಾಸಕ ಸತೀಶ ಜಾರಕಿಹೊಳಿಯವರಿಗೆ ಸತ್ಕಾರ


ಗೋಕಾಕ: ನಾಡ ಕಚೇರಿಯಲ್ಲಿ ದೊರೆಯುವ ಎಲ್ಲ ಸವಲತ್ತುಗಳನ್ನು ಸಾಮಾನ್ಯ ಜನರಿಗೆ ದೊರಕಿಸಿ ಕೊಡುವ ಕಾರ್ಯ ಅಧಿಕಾರಿಗಳು ಮಾಡಬೇಕೆಂದು ಯಮಕನಮರಡಿ ಶಾಸಕರು ಹಾಗೂ ಮಾಜಿ ಸಚಿವರಾದ ಸತೀಶ ಜಾರಕಿಹೊಳಿ ಹೇಳಿದರು.

ಸೋಮವಾರ ಸರಕಾರಿ ಕೈಗಾರಿಕಾ ತರಬೇತಿ (ಜಿಟಿಟಿಸಿ) ಕಟ್ಟಡ ಪರಿಶೀಲನೆ ನಡೆಸಿ ಬಳಿಕ ಅರಭಾವಿ ನಾಡಕಚೇರಿಗೆ  ಆಕಸ್ಮಿಕವಾಗಿ ಭೇಟಿ ನೀಡಿ ಸತ್ಕಾರ ಸ್ವೀಕರಿಸಿ ಮಾತನಾಡಿದರು.

ನಾಡ ಕಚೇರಿಯ ಕೆಲ ಪ್ರಕರಣಗಳ ಕುರಿತು ಪರಿಶೀಲನೆ ನಡೆಸಿ ಆದಷ್ಟು ಬೇಗನೆ ಜನಸಾಮಾನ್ಯರಿಗೆ ತಲುಪಿಸುವಂತಹ ಕಾರ್ಯ ಅಧಿಕಾರಿಗಳು ಮಾಡಬೇಕು. ಸರ್ಕಾರದ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಉಪತಹಶೀಲ್ದಾರ ಎಲ್.ಎಚ್.ಭೋವಿ, ಕಂದಾಯ ನಿರೀಕ್ಷಕ ಆರ್.ಐ.ನೇಸರಗಿ, ಗ್ರಾಮ ಲೇಕ್ಕಾಧಿಕಾರಿ ಎಸ್.ಕೆ.ತುಪ್ಪದ, ಜಿ.ಪಂ ಮಾಜಿ ಸದಸ್ಯ ಶಂಕರ ಬಿಲಕುಂದಿ, ಆರ್.ಟಿ.ಬಂಡಿವಡ್ಡರ, ನಾಡಕಚೇರಿಯ ಸಿಬ್ಬಂದಿಗಳಾದ ನವೀನ ಕೌಜಲಗಿ ಸೇರಿದಂತೆ ಇತರರು ಇದ್ದರು.

Leave a Reply

Your email address will not be published.