ಹಾಸನಾಂಬೆ ದರ್ಶನಕ್ಕೆ ಇಂದು ತೆರೆ


ಹಾಸನ: ಇಲ್ಲಿಯ ಪ್ರತಿಷ್ಠಿತ ಹಾಸನಾಂಬೆ ದೇವಾಲಯದ ಹಾಸನಾಂಬೆ ಉತ್ಸವಕ್ಕೆ ಇಂದು ತೆರೆಬೀಳಲಿದೆ.

ವರ್ಷಕ್ಕೊಮ್ಮೆ ಮಾತ್ರ ತೆರೆಯುವ ಹಾಸನಾಂಬೆ ದೇಗುಲದ ಗರ್ಭಗುಡಿಗೆ ಇಂದು ಮಧ್ಯಾಹ್ನ ಬೀಗ ಹಾಕಲಾಗುತ್ತದೆ.

ಈ ವರ್ಷ ನವೆಂಬರ್ 1 ರಿಂದ ಹಾಸನಾಂಬೆ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮುಖ್ಯಮಂತ್ರಿ ಕುಮಾರಸ್ವಾಮಿ, ಸಚಿವ ರೇವಣ್ಣ, ಮಾಜಿ ಪ್ರಧಾನಿ ದೇವೇಗೌಡ ಮತ್ತವರ ಕುಟುಂಬ ಸದಸ್ಯರೂ ಸೇರಿದಂತೆ ಸಾವಿರಾರು ಜನರು ಹಾಸನಾಂಬೆ ದರ್ಶನ ಪಡೆದುಕೊಂಡರು.

ಹಾಸನಾಂಬೆಯ ನೇರ ದರ್ಶನಕ್ಕೆ ಶುಲ್ಕ ಹೆಚ್ಚಳ ಮಾಡಿದ್ದು ಭಕ್ತರ ಕೆಂಗಣ್ಣಿಗೂ ಗುರಿಯಾಗಿತ್ತು.

Leave a Reply

Your email address will not be published.